ಝೊಮ್ಯಾಟೊ ಪ್ರಕರಣ: ಆಹಾರ ಸ್ವೀಕರಿಸಲು ನಿರಾಕರಿಸಿದ ವ್ಯಕ್ತಿಗೆ ಪೊಲೀಸ್ ನೋಟಿಸ್
ಭೋಪಾಲ, ಆ.1: ಹಿಂದುಯೇತರ ವ್ಯಕ್ತಿ ಆಹಾರ ಪೂರೈಸುವುದನ್ನು ವಿರೋಧಿಸಿ ಝೊಮ್ಯಾಟೊ ಸಂಸ್ಥೆ ಪೂರೈಸಿದ ಆಹಾರವನ್ನು ಪಡೆಯಲು ನಿರಾಕರಿಸಿದ ವ್ಯಕ್ತಿಗೆ ನೋಟಿಸ್ ನೀಡಲಾಗುವುದು ಎಂದು ಮಧ್ಯಪ್ರದೇಶದ ಪೊಲೀಸರು ಹೇಳಿದ್ದಾರೆ.
ಮುಸ್ಲಿಮ್ ವ್ಯಕ್ತಿ ಆಹಾರ ಪೂರೈಸುವುದಕ್ಕೆ ತನ್ನ ವಿರೋಧವಿದೆ. ಆದ್ದರಿಂದ ತಾನು ಝೊಮ್ಯಾಟೊ ಸಂಸ್ಥೆಯ ಆಹಾರ ನಿರಾಕರಿಸಿದ್ದೇನೆ ಎಂದು ಅಮಿತ್ ಶುಕ್ಲ ಎಂಬಾತ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದ.
ಈ ರೀತಿ ವರ್ತಿಸಲು ಕಾರಣವೇನು ಎಂದು ವಿವರಿಸುವಂತೆ ಅಮಿತ್ ಶುಕ್ಲಾಗೆ ನೋಟಿಸ್ ನೀಡಲಾಗುವುದು. ಇದು ನಿಜವಾಗಿದ್ದರೆ, ಧಾರ್ಮಿಕ ಭಾವನೆಗೆ ಘಾಸಿ ಉಂಟುಮಾಡಿದ ಪ್ರಕರಣವಾಗುತ್ತದೆ. ಹೀಗೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದೆ. ಈ ಬಗ್ಗೆ ತಮಗೆ ಯಾರೂ ದೂರು ಸಲ್ಲಿಸಿಲ್ಲ. ಆದರೆ ಟ್ವಿಟರ್ ಪೋಸ್ಟ್ ಅನ್ನು ಸ್ವಯಂ ಗಮನಿಸಿ ನೋಟಿಸ್ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಜಬಲ್ಪುರದ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ಹೇಳಿದ್ದಾರೆ.
Next Story