ಪ್ರೊ ಕಬಡ್ಡಿ: ಗುಜರಾತ್ಗೆ ಸತತ 3ನೇ ಜಯ
ಮುಂಬೈ, ಆ.1: ಪ್ರೊ ಕಬಡ್ಡಿ ಲೀಗ್ನಲ್ಲಿ ಗುರುವಾರ ನಡೆದ 20ನೇ ಪಂದ್ಯದಲ್ಲಿ ಗುಜರಾತ್ ಫೋರ್ಚುನ್ಜೈಂಟ್ಸ್ ತಂಡ ದಬಾಂಗ್ ದಿಲ್ಲಿ ತಂಡವನ್ನು 31-26 ಅಂಕಗಳಿಂದ ಮಣಿಸಿ ಸತತ 3ನೇ ಗೆಲುವು ದಾಖಲಿಸಿದೆ.
ಡಿಫೆಂಡರ್ ಮೋರೆ(9) ಹಾಗೂ ರೈಡರ್ ರೋಹಿತ್(8) ಗುಜರಾತ್ ತಂಡಕ್ಕೆ ರೋಚಕ ಗೆಲುವು ತಂದರು. ಸತತ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದ ದಿಲ್ಲಿ ಪರ ನವೀನ್ ಕುಮಾರ್ 10 ಅಂಕ ಗಳಿಸಿದರೂ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
Next Story