Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಖ್ಯವಾಹಿನಿ ಭಾರತೀಯ ಸುದ್ದಿ...

ಮುಖ್ಯವಾಹಿನಿ ಭಾರತೀಯ ಸುದ್ದಿ ಮಾಧ್ಯಮಗಳಲ್ಲಿ ದಲಿತರು, ಆದಿವಾಸಿಗಳಿಗಿಲ್ಲ ಜಾಗ!

ಉನ್ನತ ಸ್ಥಾನಗಳಲ್ಲಿ ಮೇಲ್ಜಾತಿಗಳದ್ದೇ ಪ್ರಾಬಲ್ಯ

ಕೃಪೆ: oxfam india, newslaundry.comಕೃಪೆ: oxfam india, newslaundry.com2 Aug 2019 8:21 PM IST
share
ಮುಖ್ಯವಾಹಿನಿ ಭಾರತೀಯ ಸುದ್ದಿ ಮಾಧ್ಯಮಗಳಲ್ಲಿ ದಲಿತರು, ಆದಿವಾಸಿಗಳಿಗಿಲ್ಲ ಜಾಗ!

ಭಾರತೀಯ ಮಾಧ್ಯಮಗಳಲ್ಲಿ ಮೇಲ್ಜಾತಿಗಳೇ ಪ್ರಾಬಲ್ಯವನ್ನು ಹೊಂದಿವೆ ಮತ್ತು ಮಾಧ್ಯಮ ಸಂಸ್ಥೆಗಳು ತಮ್ಮ ಸುದ್ದಿಮನೆ ಮತ್ತು ಸುದ್ದಿ ಪ್ರಸಾರದಲ್ಲಿ ವೈವಿಧ್ಯತೆಯನ್ನು ತರಲು ವಿಫಲಗೊಂಡಿವೆ ಎಂದು ‘ಆಕ್ಸ್‌ಫಾಮ್ ಇಂಡಿಯಾ’ ಮತ್ತು ‘ನ್ಯೂಸ್‌ಲಾಂಡ್ರಿ’ ಬಿಡುಗಡೆಗೊಳಿಸಿರುವ ಹೊಸ ವರದಿಯೊಂದು ಬಹಿರಂಗಗೊಳಿಸಿದೆ.

‘ಹೂ ಟೆಲ್ಸ್ ಅವರ್ ಸ್ಟೋರೀಸ್ ಮ್ಯಾಟರ್ಸ್: ರೆಪ್ರೆಸೆಂಟೇಷನ್ ಆಫ್ ಮಾರ್ಜಿನಲೈಸ್ಡ್ ಕಾಸ್ಟ್ ಗ್ರೂಪ್ಸ್ ಇನ್ ಇಂಡಿಯನ್ ನ್ಯೂಸ್‌ರೂಮ್ಸ್ ’ವರದಿಯು ಭಾರತೀಯ ಮಾಧ್ಯಮಗಳಲ್ಲಿ ವಿವಿಧ ಜಾತಿ ಸಮುದಾಯಗಳಿಗೆ ಸೇರಿದ ಜನರ ಪ್ರಾತಿನಿಧ್ಯ ಕುರಿತು ಅಧ್ಯಯನ ನಡೆಸಿದೆ. ವರದಿಯ ಸಾರಾಂಶವಿಲ್ಲಿದೆ.

 ಸುದ್ದಿ ಮಾಧ್ಯಮಗಳಲ್ಲಿ,ವಿಶೇಷವಾಗಿ ಯಾರಿಗೆ ಅವಕಾಶ ದೊರೆಯಬೇಕು ಎನ್ನುವುದನ್ನು ನಿರ್ಧರಿಸುವ ನಾಯಕತ್ವದ ಸ್ಥಾನಗಳಲ್ಲಿ ಶೋಷಿತ ಸಮುದಾಯಗಳ ಅನುಪಸ್ಥಿತಿಯನ್ನು ವರದಿಯು ಸ್ಪಷ್ಟವಾಗಿ ಪುನರ್‌ದೃಢಪಡಿಸಿದೆ. ಜನಾಂಗೀಯ ತಾರತಮ್ಯದಿಂದ ನೊಂದವರ ಕುರಿತು ವರದಿಗಳನ್ನೂ ಎಲ್ಲ ಸವಲತ್ತುಗಳನ್ನೂ ಹೊಂದಿರುವ ಮೇಲ್ಜಾತಿಗಳಿಗೆ ಸೇರಿದವರೇ ಬರೆಯುತ್ತಾರೆ. ಸುದ್ದಿಮನೆಗಳಲ್ಲಿ ಹೆಚ್ಚಿನ ಧ್ವನಿಗಳನ್ನು ಒಳಗೊಳಿಸುವ ಮತ್ತು ಸಮಾನ ಪ್ರಾತಿನಿಧ್ಯವನ್ನು ಸೃಷ್ಟಿಸುವ ಪ್ರಾಮಾಣಿಕವಾದ ಸಾಮೂಹಿಕ ಪ್ರಯತ್ನಗಳನ್ನು ಮಾಡಲಾಗಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದೇ ಪರಿಗಣಿಸಲಾಗಿರುವ ಮಾಧ್ಯಮ ರಂಗವು ದಲಿತರು,ಆದಿವಾಸಿಗಳು ಮತ್ತು ಇತರ ಶೋಷಿತ ಗುಂಪುಗಳಿಗೆ ಪ್ರಾತಿನಿಧ್ಯ ಕಲ್ಪಿಸುವಲ್ಲಿ ವಿಫಲವಾಗಿರುವುದು ವಿಷಾದನೀಯವಾಗಿದೆ.

‘ಈ ವರದಿಯು ಮಾಧ್ಯಮಗಳಲ್ಲಿ ಮತ್ತು ಮಾಧ್ಯಮಗಳೊಂದಿಗೆ ದುಡಿಯುತ್ತಿರುವವರು ಸಮಾನತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ಖಾತರಿಗಳನ್ನು ಎತ್ತಿ ಹಿಡಿಯುವ ಮಾರ್ಗವೊಂದರ ಬಗ್ಗೆ ಚರ್ಚಿಸಲು ಅವರಿಗೆ ಅವಕಾಶವನ್ನು ಕಲ್ಪಿಸುತ್ತದೆ. ಹೀಗಾಗಿ ವರದಿಯು ಅವರ ಪಾಲಿಗೆ ಮುಖ್ಯವಾಗಿದೆ’ ಎಂದು ಆಕ್ಸ್‌ಫಾಮ್ ಇಂಡಿಯಾದ ಸಿಇಒ ಅಮಿತಾಬ್ ಬೆಹರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವರದಿಯು ಪತ್ರಕರ್ತರು, ನಿರೂಪಕರು,ಲೇಖಕರು,ಸಂಪಾದಕರು ಮತ್ತು ಪ್ಯಾನಲಿಸ್ಟ್‌ಗಳ ಜಾತಿಗಳನ್ನು ಗುರುತಿಸಲು ಸಮೀಕ್ಷೆಗಳು,ಬೈಲೈನ್ ಎಣಿಕೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಸರಕಾರಿ ಮೂಲಗಳ ತ್ರಿಕೋನೀಕರಣ ಹೀಗೆ ಹಲವಾರು ಪದ್ಧತಿಗಳನ್ನು ಬಳಸಿಕೊಂಡಿದೆ. ಜಾತಿ ವಿವರಗಳನ್ನು ಸಂಗ್ರಹಿಸಲು ಅಕ್ಟೋಬರ್ 2018ರಿಂದ ಮಾರ್ಚ್ 2019ರ ನಡುವಿನ ಅವಧಿಯಲ್ಲಿ ಆರು ಇಂಗ್ಲಿಷ್ ಮತ್ತು ಏಳು ಹಿಂದಿ ವೃತ್ತಪತ್ರಿಕೆಗಳು, 14 ಟಿವಿ ವಾಹಿನಿಗಳಲ್ಲಿಯ ಮುಂಚೂಣಿ ಚರ್ಚಾ ಕಾರ್ಯಕ್ರಮಗಳು, 11 ಡಿಜಿಟಲ್ ಸುದ್ದಿ ತಾಣಗಳು ಮತ್ತು 12 ನಿಯತಕಾಲಿಕಗಳನ್ನು ಪರಿಶೀಲನೆಗೊಳಪಡಿಸಲಾಗಿತ್ತು. ಯಾವ ಸಮುದಾಯಗಳಿಗೆ ವಿವಿಧ ವಿಷಯಗಳ ಕುರಿತು ಮಾತನಾಡಲು ಅವಕಾಶ ಸಿಕ್ಕಿದೆ ಮತ್ತು ಎಷ್ಟರ ಮಟ್ಟಿಗೆ ಎನ್ನುವುದರ ಪ್ರಮಾಣಾತ್ಮಕ ಚಿತ್ರಣಕ್ಕಾಗಿ 65,000ಕ್ಕೂ ಅಧಿಕ ಲೇಖನಗಳು ಮತ್ತು ಸುದ್ದಿವಾಹಿನಿಗಳಲ್ಲಿಯ ಚರ್ಚೆಗಳನ್ನು ವಿಶ್ಲೇಷಿಸಲಾಗಿತ್ತು.

ಅಧ್ಯಯನಕ್ಕೊಳಪಡಿಸಲಾದ ವೃತ್ತಪತ್ರಿಕೆಗಳು,ಟಿವಿ ಸುದ್ದಿವಾಹಿನಿಗಳು,ಸುದ್ದಿ ಜಾಲತಾಣಗಳು ಮತ್ತು ನಿಯತಕಾಲಿಕಗಳಲ್ಲಿಯ ಎಡಿಟರ್-ಇನ್-ಚೀಫ್,ಮ್ಯಾನೇಜಿಂಗ್ ಎಡಿಟರ್,ಎಕ್ಸಿಕ್ಯೂಟಿವ್ ಎಡಿಟರ್, ಬ್ಯೂರೋ ಚೀಫ್ ಮತ್ತು ಇನ್‌ಪುಟ್/ಔಟ್‌ಪುಟ್ ಎಡಿಟರ್‌ಗಳ 121 ಸುದ್ದಿಮನೆ ನಾಯಕತ್ವ ಹುದ್ದೆಗಳ ಪೈಕಿ 106 ಹುದ್ದೆಗಳಲ್ಲಿ ಮೇಲ್ಜಾತಿಗಳಿಗೆ ಸೇರಿದವರಿದ್ದು, ಐದರಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದವರಿದ್ದರು. ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಆರು ಹುದ್ದೆಗಳಲ್ಲಿದ್ದರು. ನಾಲ್ವರ ಜಾತಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.

ಚರ್ಚಾ ಕಾರ್ಯಕ್ರಮಗಳನ್ನು ನಿರ್ವಹಿಸುವ ಹಿಂದಿ ವಾಹಿನಿಗಳ 40 ಮತ್ತು ಇಂಗ್ಲಿಷ್ ವಾಹಿನಿಗಳ 47 ನಿರೂಪಕರ ಪೈಕಿ ಪ್ರತಿ ನಾಲ್ವರಲ್ಲಿ ಮೂವರು ಮೇಲ್ಜಾತಿಗಳಿಗೆ ಸೇರಿದ್ದು, ದಲಿತ,ಆದಿವಾಸಿ ಅಥವಾ ಒಬಿಸಿ ಸಮುದಾಯಗಳಿಗೆ ಸೇರಿದ ಒಬ್ಬರೂ ಇಲ್ಲ.

ಸುದ್ದಿವಾಹಿನಿಗಳ ಶೇ.70ರಷ್ಟು ಪ್ರೈಮ್‌ಟೈಮ್ ಚರ್ಚೆಗಳಲ್ಲಿ ಪ್ಯಾನೆಲಿಸ್ಟ್‌ಗಳು ಅಥವಾ ಚರ್ಚೆಗಳಲ್ಲಿ ಭಾಗಿಯಾಗುವವರಲ್ಲಿ ಹೆಚ್ಚಿನವರು ಮೇಲ್ಜಾತಿಗಳಿಗೆ ಸೇರಿದವರೇ ಆಗಿರುತ್ತಾರೆ.

ಇಂಗ್ಲಿಷ್ ವೃತ್ತಪತ್ರಿಕೆಗಳಲ್ಲಿಯ ಎಲ್ಲ ಲೇಖನಗಳ ಪೈಕಿ ದಲಿತರು ಮತ್ತು ಆದಿವಾಸಿಗಳು ಬರೆದ ಲೇಖನಗಳ ಸಂಖ್ಯೆ ಶೇ.5ನ್ನೂ ದಾಟಿಲ್ಲ. ಸುದ್ದಿ ಜಾಲತಾಣಗಳಲ್ಲಿನ ಬೈಲೈನ್ ಹೊಂದಿದ ಲೇಖನಗಳ ಪೈಕಿ ಸುಮಾರು ಶೇ.72ರಷ್ಟು ಲೇಖನಗಳನ್ನು ಬರೆದವರು ಮತ್ತೆ ಅದೇ ಮೇಲ್ಜಾತಿಗಳಿಗೆ ಸೇರಿದವರಾಗಿದ್ದಾರೆ.

ಅಧ್ಯಯನಕ್ಕೊಳಗಾದ 12 ನಿಯತಕಾಲಿಕಗಳ ಮುಖಪುಟ ಲೇಖನಗಳ ಪೈಕಿ ಕೇವಲ 10 ಮಾತ್ರ ಜಾತಿಗೆ ಸಂಬಧಿತ ವಿಷಯಗಳ ಕುರಿತಾಗಿದ್ದವು.

ಪ್ರಾತಿನಿಧ್ಯಗಳೊಂದಿಗಿನ ಮಾಧ್ಯಮಗಳ ಸಮಸ್ಯೆಯು ದೇಶದಲ್ಲಿ ಸುದ್ದಿ ಪ್ರಸಾರದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಜಾತಿ ವಿಷಯಗಳ ಕುರಿತು ಸುದ್ದಿ/ಲೇಖನಗಳ ಪೈಕಿ ಶೇ.50ಕ್ಕೂ ಹೆಚ್ಚಿನ ಸುದ್ದಿ/ಲೇಖನಗಳನ್ನು ಒಂದು ಇಂಗ್ಲಿಷ್ ವೃತ್ತಪತ್ರಿಕೆಯು ಮಾತ್ರ ಪ್ರಕಟಿಸಿತ್ತು ಮತ್ತು ಉಳಿದವು ಹೆಚ್ಚಿನ ಆಸಕ್ತಿ ವಹಿಸಿರಲಿಲ್ಲ ಎಂಬ ಅಪಾಯಕಾರಿ ಪ್ರವೃತ್ತಿಯನ್ನು ವರದಿಯು ಬೆಟ್ಟು ಮಾಡಿದೆ.

‘ಅಗೋಚರರನ್ನು ಗೋಚರವಾಗುವಂತೆ ಮಾಡಿ ’ ಎಂಬ ಹಳಸಲು ಕ್ಲೀಷೆಯು ಬಹುಶಃ ನಮ್ಮ ಮಾಧ್ಯಮ ಸಂಸ್ಥೆಗಳ ಇಂದಿನ ಸ್ಥಿತಿಯನ್ನು ವಿವರಿಸುತ್ತದೆ. ನಾವು ಹೇಗೆ ಪ್ರಾತಿನಿಧಿಕರಾಗಿಬೇಕು ಎಂಬ ಕುರಿತು ಚರ್ಚೆಗಳು ಮತ್ತು ವಿವರಣೆಗಳನ್ನು ನೋಡಿದ್ದೇವೆ,ಆದರೆ ಈ ಸಮಸ್ಯೆಯ ಗಂಭೀರತೆಯನ್ನು ತಿಳಿದುಕೊಳ್ಳಲು ಯಾವುದೇ ನಿಜವಾದ ದತ್ತಾಂಶ ಲಭ್ಯವಿಲ್ಲ. ಈ ಕುರಿತು ಸಂವಾದವು ನಿರೀಕ್ಷಿದಷ್ಟು ಫಲದಾಯಕವಾಗಿಲ್ಲ.

“ಈ ವರದಿಯು ಮುಖ್ಯವಾಗಿದೆ ಮತ್ತು ಫಲಿತಾಂಶಗಳನ್ನು ನೋಡಿದ ಬಳಿಕ ಅದರ ಅಗತ್ಯವು ನಮಗೆ ಮನದಟ್ಟಾಗಿದೆ. ವೈವಿಧ್ಯತೆ ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವವಲ್ಲ. ಪ್ರಜಾಪ್ರಭುತ್ವವು ವಿಜೃಂಭಿಸಬೇಕಾದರೆ ಪತ್ರಿಕೋದ್ಯಮವು ಬೆಳೆಯಬೇಕು ಮತ್ತು ಪತ್ರಿಕೋದ್ಯಮವು ಬೆಳೆಯಬೇಕಿದ್ದರೆ ವೈವಿಧ್ಯತೆಯು ದೃಢವಾಗಿರಬೇಕು. ಸುದ್ದಿಮನೆಗಳಲ್ಲಿ ಜಾತಿ ವೈವಿಧ್ಯತೆಯ ಅಂಕಿಸಂಖ್ಯೆಗಳು ನಿರಾಶಾದಾಯಕವಾಗಿರುವುದರಿಂದ ನಾವು ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕಿದೆ. ಇದು ನಮ್ಮ ಪ್ರಜಾಪ್ರಭುತ್ವದ ಗುಣಮಟ್ಟದ ಕುರಿತು ಕರಾಳ ವ್ಯಾಖ್ಯಾನವಾಗಿದೆ. ಈ ವರದಿಯು ನಮ್ಮನ್ನು ನಾವು ಕನ್ನಡಿಯಲ್ಲಿ ನೋಡಿಕೊಳ್ಳಲು ಮೊದಲ ಹೆಜ್ಜೆಯಾಗಿದೆ ಮತ್ತು ನಮ್ಮೆದುರಿನ ಡ್ಯಾಷ್‌ಬೋರ್ಡ್ (ಸುದ್ದಿಮನೆ)ನಲ್ಲಿ ನಂಬರ್‌ಗಳು ಕಾಣಿಸಿಕೊಂಡವೆಂದರೆ ನಾವು ಪ್ರತಿವರ್ಷ ಅದನ್ನು ಹೆಚ್ಚಿಸಲು ಪ್ರಯತ್ನಿಸಬಹುದು. ಪ್ರತಿ ವರ್ಷವೂ ಈ ವರದಿಯನ್ನು ತರುವುದು ನಮ್ಮ ಗುರಿಯಾಗಿದೆ ಮತ್ತು ನಂಬರ್‌ಗಳಲ್ಲಿ ಸುಧಾರಣೆಯಾಗುತ್ತದೆ ಎಂದು ಆಶಿಸಿದ್ದೇವೆ. ಇತರ ಉದ್ಯಮಗಳು ಸುದ್ದಿಮನೆಗಳು ಮತ್ತು ಬೋರ್ಡ್ ರೂಮ್‌ಗಳಲ್ಲಿ ಇದನ್ನು ಮಾಡುತ್ತವೆ ಎಂದೂ ನಾವು ಆಶಿಸುತ್ತೇವೆ “ಎಂದು ‘ನ್ಯೂಸ್‌ಲಾಂಡ್ರಿ’ಯ ಸಿಇಒ ಅಭಿನಂದನ್ ಸೇಕ್ರಿ ಹೇಳಿದ್ದಾರೆ.

 ದೇಶದ ಸಾಮಾಜಿಕ ಮತ್ತು ಜನಸಂಖ್ಯಾ ಸ್ವರೂಪಕ್ಕೆ ಅನುಗುಣವಾಗಿ ಸುದ್ದಿಮನೆಗಳಲ್ಲಿ ವೈವಿಧ್ಯತೆಯನ್ನು ತರಲು ಧನಾತ್ಮಕ ಕ್ರಮಗಳು ಸೇರಿದಂತೆ ಪೂರ್ವ ನಿಯಾಮಕ ಹೆಜ್ಜೆಗಳ ಅಗತ್ಯವನ್ನು ವರದಿಯು ಸೂಚಿಸುತ್ತಿದೆ. ಇದಕ್ಕಾಗಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ವ್ಯವಸ್ಥೆಗಳನ್ನು ರೂಪಿಸಬೇಕು ಮತ್ತು ಸಮಾಜದ ಎಲ್ಲ ವರ್ಗಗಳಿಂದ ಪತ್ರಕರ್ತರನ್ನು ತರಬೇತುಗೊಳಿಸುವ ಮತ್ತು ನೇಮಕ ಮಾಡಿಕೊಳ್ಳುವ ಸಂಘಟಿತ ಪ್ರಯತ್ನಗಳಾಗಬೇಕು ಎಂದೂ ವರದಿಯು ಹೇಳಿದೆ.

share
ಕೃಪೆ: oxfam india, newslaundry.com
ಕೃಪೆ: oxfam india, newslaundry.com
Next Story
X