ಬೆಂಗಳೂರು ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ನೇಮಕ: ಕೋರ್ಟ್ ಮೆಟ್ಟಿಲೇರಲು ಅಲೋಕ್ ಕುಮಾರ್ ಚಿಂತನೆ
ಅಲೋಕ್ ಕುಮಾರ್
ಬೆಂಗಳೂರು, ಆ.2: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಭಾಸ್ಕರ್ ರಾವ್ರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಅವರು ಸಿಎಟಿಗೆ ಅರ್ಜಿ ಸಲ್ಲಿಕೆ ಮಾಡಲು ಚಿಂತನೆ ನಡೆಸಿದ್ದಾರೆ.
ಪ್ರಮುಖ ಕಾರಣವಿಲ್ಲದೆ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ. ಐಪಿಎಸ್ ಅಧಿಕಾರಿ ವರ್ಗಾವಣೆ ಆಗುವುದಕ್ಕೆ ಒಂದು ವರ್ಷ ಆಗಬೇಕು. ಆದರೆ, ವರ್ಷ ಮುಗಿಯದೆ 47 ದಿನಗಳಲ್ಲಿ ವರ್ಗಾವಣೆ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಕಾನ್ಸ್ ಟೇಬಲ್ ನಿಂದ ಹಿಡಿದು ಡಿಜಿವರೆಗೂ ಕೆಲ ನಿಯಮಗಳಿವೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಅಲೋಕ್ ಕುಮಾರ್ ಪರ ವಕೀಲರು ಶನಿವಾರ ಅಥವಾ ಸೋಮವಾರ ಸಿಎಟಿಗೆ ಅರ್ಜಿ ಸಲ್ಲಿಸಲಿದ್ದಾರೆ.
Next Story