ಯುವಕ ನಾಪತ್ತೆ: ದೂರು
ಪುತ್ತೂರು : ಪುತ್ತೂರು ನಗರದ ಹೊರವಲಯದಲ್ಲಿರುವ ಕೆಮ್ಮಾಯಿ ಪೆಟ್ರೋಲ್ ಪಂಪ್‍ನಲ್ಲಿ ಉದ್ಯೋಗ ಮಾಡುತ್ತಿದ್ದ ಪುತ್ತೂರು ತಾಲೂಕಿ ಬಲ್ನಾಡು ಗ್ರಾಮದ ಬಿರ್ಮರಕೋಡಿ ನಿವಾಸಿಯಾದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಶುಕ್ರವಾರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಬಲ್ನಾಡು ಗ್ರಾಮದ ಬಿರ್ಮರೆಕೋಡಿ ನಿವಾಸಿ ವಿಶ್ವನಾಥ ಗೌಡ ಎಂಬವರ ಪುತ್ರ ಚೇತನ್ ಬಿ. (22) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ.
ಚೇತನ್ ಅವರ ಮೊಬೈಲ್ ಹಾಗೂ ಪರ್ಸ್ ಪುತ್ತೂರು ನಗರದ ಬ್ಯಾಂಕ್ ಒಂದರ ಎಟಿಎಂ ಒಳಗಡೆ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





