ಆಧುನಿಕ ಶಿಕ್ಷಣದಿಂದ ವೃತ್ತಿಗೆ ಸಿಗುವಷ್ಟು ಮಹತ್ವ ಮೌಲ್ಯಗಳಿಗೆ ಸಿಗುತ್ತಿಲ್ಲ- ರಾಮದಾಸ ಪ್ರಭು

ಭಟ್ಕಳ: ಆಧುನಿಕ ಶಿಕ್ಷಣ ಪದ್ಧತಿಯು ಕೇವಲ ವೃತ್ತಿಗಷ್ಟೇ ಮಹತ್ವ ನೀಡಿ ಜೀವನ ಮೌಲ್ಯಗಳ ಕುರಿತಾದ ವಿಷಯವನ್ನು ಉಪೇಕ್ಷೆ ಮಾಡುತ್ತಿರುವುದರಿಂದ ಮೌಲ್ಯಯುತ ಭಾವನೆಗಳು ಕಡಿಮೆಯಾಗುತ್ತಿದ್ದು ಇಂತಹ ನೈತಿಕ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇಂದಿನ ಯುವಜನಾಂಗಕ್ಕೆ ಅಗತ್ಯವಾಗಿದೆ ಎಂದು ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಹೇಳಿದರು.
ಅವರು ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಲ್ಲಿ ಆಯೋಜಿಸಿದ “ಸಂಸ್ಕಾರ ಸುಧಾ” ನೈತಿಕ ಮೌಲ್ಯಗಳ ಶಿಕ್ಷಣ ಮಾಲಿಕೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಟ್ಕಳ ಎಜ್ಯುಕೇಶನ ಟ್ರಸ್ಟನ ಅಧ್ಯಕ್ಷ ಡಾ. ಸುರೇಶ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನರಸಿಂಹ ಮೂರ್ತಿ, ದಿ ನ್ಯೂ ಇಂಗ್ಲೀಷ ಪಿ.ಯು. ಕಾಲೇಜಿನ ಹಳೆ ವಿದ್ಯಾರ್ಥಿನಿ ಸಿ ಎ. ಧನಶ್ರೀ ರವೀಂದ್ರ ಫ್ರಭು ಉಪಸ್ಥಿತರಿದ್ದರು.
ಪ್ರಾಂಶುಪಾಲ ವಿರೇಂದ್ರ ವಿ. ಶ್ಯಾನಭಾಗ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರಾಮಚಂದ್ರ ಭಟ್ ವಂದಿಸಿದರು. ಶ್ಯಾಮಲಾ ಕಾಮತ ನಿರ್ವಹಿಸಿದರು, ವಿದ್ಯಾರ್ಥಿಗಳಾದ ಮೇಘನಾ ಮತ್ತು ಸಂಗಡಿಗರು ಸ್ವಾಗತಿಸಿದರು.







