ಬಂಟ್ವಾಳ: ವಿದ್ಯುತ್ ಅಘಾತಕ್ಕೆ ಮಹಿಳೆ ಬಲಿ

ಬಂಟ್ವಾಳ, ಆ. 3: ವಿದ್ಯುತ್ ಅಘಾತಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಎಂಬಲ್ಲಿ ಶನಿವಾರ ನಡೆದಿದೆ.
ಇಲ್ಲಿನ ಜನತಾ ಗೃಹ ನಿವಾಸಿ ವಿಶ್ವನಾಥ ಬಂಗೇರ ಎಂಬವರ ಪತ್ನಿ ಗೀತಾ (54) ಮೃತ ಮಹಿಳೆ.
ಇವರು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ತಂತಿಯ ಮೇಲೆ ಬಟ್ಟೆಯನ್ನು ಒಣಗಿಸಲು ಹಾಕಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಅಘಾತಕ್ಕೊಳಗಾಗಿ ಅಸ್ವಸ್ಥರಾಗಿದ್ದ ಅವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಿದ್ದು, ಮೃತಪಟ್ಟಿರುವ ಬಗ್ಗೆ ಇಲ್ಲಿನ ವೈದ್ಯರು ದೃಢಪಡಿಸಿದರು. ಮೃತರು ಪತಿ, ಮೂವರು ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





