ಇಂಡಿಯನ್ ಆಯಿಲ್ ದಕ್ಷಿಣ ವಲಯದ ಕಾರ್ಯನಿರ್ವಾಹಕ ನಿರ್ದೇಶಕರ ನೇಮಕ
ಬೆಂಗಳೂರು, ಆ.3: ಇಂಡಿಯನ್ ಆಯಿಲ್‌ನ ದಕ್ಷಿಣ ವಲಯದ ಕಾರ್ಯನಿರ್ವಾಹಕ ನಿರ್ದೇಶಕರಾಗಿ(ಪ್ರಾದೇಶಿಕ ಸೇವೆಗಳು) ಅರೂಪ್ ಸಿನ್ಹಾ ಅಧಿಕಾರ ವಹಿಸಿಕೊಂಡಿದ್ದಾರೆ.
ತಮಿಳುನಾಡು, ಪುದುಚೇರಿ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳನ್ನು ಒಳಗೊಂಡ ದಕ್ಷಿಣ ವಲಯದಲ್ಲಿ ಮಾನವ ಸಂಪನ್ಮೂಲ, ಹಣಕಾಸು, ಸುರಕ್ಷತೆ ಮತ್ತು ಭದ್ರತೆ, ವಾಯುಯಾನ ಮತ್ತು ಗುಣಮಟ್ಟ ಸೇರಿದಂತೆ ಪ್ರಮುಖ ಕ್ಷೇತ್ರಗಳ ಪ್ರಾದೇಶಿಕ ಉಸ್ತುವಾರಿ ವಹಿಸುವುದರ ಜತೆಗೆ ಐದೂ ರಾಜ್ಯಗಳ ತೈಲ ಮತ್ತು ಅನಿಲ ಉದ್ಯಮದ ಪ್ರಾದೇಶಿಕ ಮಟ್ಟದ ಸಂಯೋಜಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಸಿನ್ಹಾ ಆಪರೇಷನ್ಸ್, ವಾಯುಯಾನ, ಚಿಲ್ಲರೆ ವಹಿವಾಟು ಮತ್ತು ಸಾಂಸ್ಥಿಕ ವ್ಯವಹಾರ ವಿಸ್ತರಣೆ, ಎಲ್‌ಪಿಜಿ ಹಾಗೂ ಲೂಬ್ರಿಕೆಂಟ್ಸ್ ವಹಿವಾಟು ಸೇರಿದಂತೆ ಪೆಟ್ರೋಲಿಯಂ ಕ್ಷೇತ್ರದ ಪ್ರಮುಖ ವಿಭಾಗಗಳಲ್ಲಿ ಮೂರು ದಶಕಗಳ ಕಾಲ ಅನುಭವ ಹೊಂದಿದ್ದಾರೆ. ದೇಶದಾದ್ಯಂತ ಗ್ರಾಮೀಣ ಶಾಲೆಗಳಲ್ಲಿ ಶೌಚಗೃಹಗಳ ನಿರ್ಮಾಣ ಸೇರಿ ಇಂಡಿಯನ್ ಆಯಿಲ್‌ನ ಅನೇಕ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.





