ಮುಂಬೈ: ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

ಮುಂಬೈ, ಆ. 3: ಮುಂಬೈ ಹಾಗೂ ಉಪ ನಗರಗಳಲ್ಲಿ ಶನಿವಾರ ಭಾರೀ ಮಳೆ ಸುರಿದಿದ್ದು, ರವಿವಾರ ಹಾಗೂ ಸೋಮವಾರ ಕೂಡ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಈ ಪ್ರದೇಶದಲ್ಲಿ ರವಿವಾರ ರೆಡ್ ಅಲರ್ಟ್ ಘೋಷಿಸಿದೆ. ಇಂದು ಸುರಿದ ಧಾರಾಕಾರ ಮಳೆಯಿಂದ ಪಶ್ಚಿಮ ಲೈನ್‌ನಲ್ಲಿ ರೈಲುಗಳು 15 ನಿಮಿಷ ತಡವಾಗಿ ಸಂಚರಿಸಿತು. ಬೆಸ್ಟ್ ಬಸ್‌ಗಳ ಸಂಚಾರದ ದಿಕ್ಕನ್ನು ಬದಲಾಯಿಸಲಾಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಎಚ್ಚರಿಗೆ ನೀಡಲಾಗಿತ್ತು.
ಭಾರೀ ಮಳೆಯಿಂದಾಗಿ ಸಾಯಿನಾತ್ ಸಬ್‌ವೇ, ದಹೀಸರ್ ಸಬ್‌ವೇ, ಮೋತಿಲಾಲ್ ನಗರ್ ಪೋಸ್ಟ್ ಆಫೀಸ್ ಹಾಗೂ ಇತರ ಹಲವು ಪ್ರದೇಶಗಳು ಜಲಾವೃತವಾಗಿದ್ದು, ವಾಹನಗಳ ಸಂಚರ ಅಸ್ತವ್ಯಸ್ತಗೊಂಡಿತು.
ಸೂರ್ಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪಾಲ್ಘಾರ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಯಿತು. ಮನೋರ್ ರಸ್ತೆ ಜಲಾವೃತವಾದ ಹಿನ್ನೆಲೆಯಲ್ಲಿ ವಿಕ್ರಮ್‌ಗಧ್, ಜವ್ಹಾರ್ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿತ್ತು.
Next Story







