ಪ್ರೊ ಕಬಡ್ಡಿ: ಅಜೇಯ ಓಟ ಮುಂದುವರಿಸಿದ ಜೈಪುರ

ಪಾಟ್ನಾ, ಆ.3: ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಶನಿವಾರ ಇಲ್ಲಿನ ಪಾಟಲೀಪುತ್ರ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಲೀಗ್‌ನ 23ನೇ ಪಂದ್ಯದಲ್ಲಿ ಜೈಪುರ ತಂಡ ಪಾಟ್ನಾ ಪೈರೇಟ್ಸ್ ತಂಡವನ್ನು 34-21 ಅಂಕಗಳ ಅಂತರದಿಂದ ಮಣಿಸಿತು. ಟೂರ್ನಿಯಲ್ಲಿ ತಾನಾಡಿದ ನಾಲ್ಕನೇ ಪಂದ್ಯವನ್ನು ಜಯಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿತು. ಒಟ್ಟು 20 ಅಂಕ ಗಳಿಸಿ ಅಗ್ರ ಸ್ಥಾನ ಉಳಿಸಿಕೊಂಡಿತು.
ಆತಿಥೇಯ ಪಾಟ್ನಾ ತಂಡ ತಾನಾಡಿದ 4ನೇ ಪಂದ್ಯದಲ್ಲಿ 2ನೇ ಸೋಲು ಕಂಡಿತು. ಒಟ್ಟು 11 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ವಿಜೇತ ಜೈಪುರ ತಂಡದ ಪರ ದೀಪಕ್ ನರ್ವಾಲ್ 9 ಅಂಕ ಗಳಿಸಿದರೆ,ಸಂದೀಪ್ 8 ಹಾಗೂ ಅಮಿತ್ ಹೂಡ 5 ಅಂಕ ಗಳಿಸಿದರು. ಪರಾಜಿತ ಪಾಟ್ನಾದ ಪರ ಪರ್ದೀಪ್ ನರ್ವಾಲ್ 9 ಹಾಗೂ ಮೋನು 5 ಅಂಕ ಕಲೆ ಹಾಕಿದರು.
Next Story





