ಮಂಗಳೂರು: ಇಂಡಿಯನ್ ಡಿಸೈನ್ ಸ್ಕೂಲ್ನಲ್ಲಿ ‘ಡಿಸೈನ್ ಸೆಲಬ್ರೇಷನ್’
ಮಂಗಳೂರು, ಆ. 3: ಇಂಡಿಯನ್ ಡಿಸೈನ್ ಸ್ಕೂಲ್ನಲ್ಲಿ ಮೊದಲ ‘ಡಿಸೈನ್ ಸೆಲಬ್ರೇಷನ್’ ಕಾರ್ಯಕ್ರಮ ಜುಲೈ 27ರಂದು ನಡೆಯಿತು. ಈ ಕಾರ್ಯಕ್ರಮವನ್ನು ಏಷಿಯನ್ ಪೈಂಟ್ಸ್ ಆಯೋಜಿಸಿತ್ತು.
ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿ, ಇಂಟೀರಿಯರ್ ಡಿಸೈನರ್ ಹಾಗೂ ಮಾಹೆಯ ಸಹ ಪ್ರಾದ್ಯಾಪಕ ಸೋನಾಲ್ ಶೆಟ್ಟಿ ರಾವ್ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡರು.
ಏಷಿಯನ್ ಪೈಂಟ್ಸ್ ಹಾಗೂ ಅದರ ಉತ್ಪನ್ನಗಳ ಬಗ್ಗೆ ಅಭಿಷೇಕ್ ಹಾಗೂ ರಾಘವೇಂದ್ರ ಪ್ರಸ್ತುತಿ ನಡೆಸಿದರು ಹಾಗೂ ಕಂಪೆನಿಯ ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.
ಸೋನಾಲ್ ಶೆಟ್ಟಿ ರಾವ್ ಅವರು ಏಷ್ಯನ್ ಪೈಂಟ್ನ ನೂತನ ಉತ್ಪನ್ನಗಳಾದ ‘ಕಾಸ್ಮೋಸ್’ ಹಾಗೂ ‘ವುಡ್ಟೆಕ್ ಸ್ಪೆಕ್ಟ್ರಾ’ವನ್ನು ಬಿಡುಗಡೆ ಮಾಡಿದರು. ಅಪರಾಹ್ನ ಏಷ್ಯನ್ ಪೈಂಟ್ ವಿದ್ಯಾರ್ಥಿಗಳಿಗೆ ‘ವಾಲ್ ಫಿನಿಶಸ್ ವರ್ಕ್ಶಾಪ್’ ನಡೆಸಿತು. ಇಂಡಿಯನ್ ಡಿಸೈನ್ ಸ್ಕೂಲ್ನ ಗೋಡೆಗಳ ಮೇಲೆ ಪುಟ್ಟಿ ಫಿನಿಶ್, ಟೆಕ್ಸ್ಚ್ರ್ಡ್ ಫಿನಿಶ್ ಹಾಗೂ ಪೈಂಟ್ ಫಿನಿಶ್ಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿತು.
ಸೋನಾಲ್ ಶೆಟ್ಟಿ ರಾವ್, ಅಭಿಷೇಕ್ ಹಾಗೂ ರಾಘವೇಂದ್ರ ಅವರಿಗೆ ‘ಇಂಡಿಯನ್ ಡಿಸೈನ್ ಸ್ಕೂಲ್’ ಅಧ್ಯಕ್ಷ ಮುಹಮ್ಮದ್ ನಿಸಾರ್, ನಿರ್ದೇಶಕಿ ನಫೀಸಾ ಶಿರಿನ್ ಹಾಗೂ ಪ್ರಾಂಶುಪಾಲ ರಾಮನಾಥ್ ನಾಯಕ್ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.