ಭಾರಿ ಮಳೆ; ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತ

ಮುಂಬೈ, ಆ.4: ಸತತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ಜನ ಜೀವನ ಅಸ್ತವ್ಯವಸ್ತಗೊಂಡಿದೆ. ವಾಹನ, ರೈಲು ಮತ್ತು ವಿಮಾನಗಳ ಸಂಚಾರದಲ್ಲಿ ನ ಭಾರಿ ವ್ಯತ್ಯವಾಗಿದೆ. ಉಲಾಸ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಥಾಣೆ, ನವಿ ಮುಂಬೈ, ಕುರ್ಲಾ ಪ್ರದೇಶಗಳು ಜಲಾವೃತಗೊಂಡಿದೆ. ನಗರದ ರಸ್ತೆಗಳು ಮತ್ತು ರೈಲುಗಳ ಹಳಿಗಳು ನೀರಿನಲ್ಲಿ ಮುಳುಗಿದೆ. ರಾಜೀವ ಗಾಂಧಿ ನಗರದಲ್ಲಿ ಭೂ ಕುಸಿತದಿಂದಾಗಿ ನಾಲ್ವರು ಗಾಯಗೊಂಡಿದ್ದಾರೆ. ಪಾಲ್ಗಾರ್ ನಲ್ಲಿ 16 ಹರೆಯದ ಬಾಲಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ವರದಿಯಾಗಿದೆ.
ನೆರೆ ನೀರಿನಿಂದಾಗಿ ತೊಂದರೆಗೊಳಗಾದವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸರು , ಎನ್ ಡಿಆರ್ ಎಫ್ ನ 8 ತಂಡಗಳು ಕಾರ್ಯನಿರತವಾಗಿದೆ.
Next Story





