Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಧ್ಯವಯಸ್ಕರು ವೃದ್ಧರೇ?

ಮಧ್ಯವಯಸ್ಕರು ವೃದ್ಧರೇ?

ನವಿರು ಸಾಲು

ಶಾಂತಲಾ ರಾವ್, ಬೋಳಾರಶಾಂತಲಾ ರಾವ್, ಬೋಳಾರ4 Aug 2019 3:12 PM IST
share
ಮಧ್ಯವಯಸ್ಕರು ವೃದ್ಧರೇ?

        ಶಾಂತಲಾ ರಾವ್, ಬೋಳಾರ

ಟಿ.ವಿ.ಯಲ್ಲಿ ಜಾಹೀರಾತು ಪ್ರಸಾರವಾಗುತ್ತಿತ್ತು. ಹೆಣ್ಣೊಬ್ಬಳು ಕನ್ನಡಿ ಮುಂದೆ ನಿಂತು ತನ್ನ ಅಲ್ಲಲ್ಲಿ ಇಣುಕುತ್ತಿರುವ ಬೆಳ್ಳಿಕೂದಲುಗಳು, ಕೆನ್ನೆ ಮೇಲಿನ ನೆರಿಗೆಗಳು,ಕಣ್ಣ ಸುತ್ತಮುತ್ತ ಕಪ್ಪುವರ್ತುಲಗಳೆಂಬ ಅತ್ಯಂತ ಭೀಕರ ದೃಶ್ಯಗಳನ್ನು ನೋಡಿ ಬೆಚ್ಚಿಬೀಳುತ್ತಾಳೆ. ಆಕಾಶವೇ ತಲೆ ಮೇಲೆ ಬಿದ್ದಂತೆ ಚಿಂತಾಕ್ರಾಂತಳಾಗಿ ಮ್ಲಾನವದನಳಾಗುತ್ತಾಳೆ!! ಅಲ್ಲಾ, ಕನ್ನಡಿ ಹಾಗೂ ಹೆಣ್ಣು, ಇದು ಅವಿನಾಭಾವ ಸಂಬಂಧವೆಂದು ಎಲ್ಲರ ಅಭಿಪ್ರಾಯವಾಗಲು ಕಾರಣವೇನು? ನನಗಂತೂ ಯೌವನ ಹಾಗೂ ಕನ್ನಡಿ ಇವೆರಡಕ್ಕಾದರೆ ಅವಿನಾಭಾವ ಸಂಬಂಧವೆನ್ನುವುದು ಸರಿ ಅನ್ನಿಸುತ್ತದೆ. ಇರಲಿ ಬಿಡಿ, ಟಿ.ವಿ.ಯಲ್ಲಿ ಮುಂದೇನಾಯಿತೆಂದು ನೋಡೋಣ. ಅಲ್ಲಿ ಕೂಡಲೇ ಒಂದು ಕ್ರೀಮ್ ಪ್ರತ್ಯಕ್ಷ!. ಇದನ್ನು ಹಚ್ಚಿದೊಡನೇ ಆಕೆಯ ಯೌವನ ನಳನಳಿಸಿ, ಈವರೆಗೆ ಆಕೆಯನ್ನು ತಿರುಗಿಯೂ ನೋಡದಿದ್ದ ಗಂಡಸರು ಅವಳತ್ತ ಮೆಚ್ಚುಗೆಯ ದೃಷ್ಟಿಹರಿಸುತ್ತಾರೆ!! ಆಕೆಯ ಮುಖದಲ್ಲೀಗ ಜಂಭದ ನಗು! ಈ ದೃಶ್ಯವನ್ನು ಅದೆಷ್ಟು ಚೆನ್ನಾಗಿ ತೋರಿಸುತ್ತಾರೆಂದರೆ 30ರ ಆಸುಪಾಸಿನ ಮಹಿಳೆಯರೂ ಆ ಕ್ರೀಮಿನ ಹೆಸರನ್ನು ತನ್ನ ಸ್ಮತಿಪಟಲದಲ್ಲಿರಿಸಿ ಮುಂದೆ ಸೂಪರ್ ಬಝಾರಿಗೆ ಹೋದಾಗ ಆ ಕ್ರೀಮನ್ನು ಹುಡುಕಾಡಿ ತಕ್ಷಣವೇ ತನ್ನ ಟ್ರಾಲಿಯಲ್ಲಿ ಸೇರಿಸಿ ಬಿಡುವುದರಲ್ಲಿ ಸಂಶಯವೇ ಇಲ್ಲ!! ಹೆಣ್ಣಿಗೆ ಯೌವನ ಮತ್ತು ಬಿಳಿ ಚರ್ಮ ಇವೆರಡೇ ಭೂಷಣ, ಇವೆರಡು ಇಲ್ಲದ ಹೆಣ್ಣು ಯಾರಿಗೂ ಲೆಕ್ಕಕ್ಕೇ ಇಲ್ಲವೆಂದು ಜಾಹೀರಾತುಗಳು ಸಾರಿಸಾರಿ ಹೇಳಿ, ಈಗ ನಮ್ಮ ಸುತ್ತಮುತ್ತಲಿನ ಗಂಡಸರೂ ಇದೇ ಅಭಿಪ್ರಾಯ ಬೆಳೆಸಿಕೊಂಡಿದ್ದಾರೆ.

ಗೀತಾ ತನ್ನ ಪತಿಯೊಂದಿಗೆ ಸೌತ್ ಇಂಡಿಯಾ ಟೂರ್ ಹೋಗಲು ಟ್ರಾವೆಲ್ಸ್‌ನವರೊಂದಿಗೆ ಮಾತನಾಡಿ ಎಲ್ಲರೊಂದಿಗೆ ಹೋಗುವುದು ಮಜಾವಾಗಿರುತ್ತದೆಂದು ಹೊರಟಳು. ಅಪರಿಚಿತರೂ ಆತ್ಮೀಯರಾಗುತ್ತಾರೆ, ಚೆನ್ನಾಗಿ ಎಂಜಾಯ್ ಮಾಡಬಹುದೆಂದು ಹೋದರೆ... ಕೆಲವೇ ದಿನಗಳಲ್ಲಿ ನಡೆದ ಪ್ರಸಂಗವೊಂದು ಅವಳ ಮನ ಕದಡಿತು. ಇವರ ಸೀಟಿನ ಪಕ್ಕದಲ್ಲೇ ಕುಳಿತಿದ್ದ ದಂಪತಿ ಇವರಿಗೆ ಒಂದೇ ದಿನದಲ್ಲಿ ಪರಿಚಿತರಾಗಿ ಸ್ವಲ್ಪ ಸಲಿಗೆಯೂ ಬೆಳೆದಿತ್ತು. ಅವರಿಗೂ ಇವಳ ಮಗನ ಪ್ರಾಯದ್ದೇ ಮಗಳಿದ್ದಳು. ಗೀತಾ ಸುಮಾರು 48 ರ ಪ್ರಾಯದವಳಾಗಿದ್ದು ಚೆನ್ನಾಗಿ ಡ್ರೆಸ್ಸ್ ಮಾಡಿಕೊಳ್ಳುತ್ತಾಳೆ. ಎಂ.ಎ. ಇಂಗ್ಲಿಷ್ ಪದವೀಧರೆ, ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದಾಳೆ. ಏನೋ ಒಂದು ಪ್ರಸಂಗದಲ್ಲಿ ಆ ಗಂಡಸು ಗೀತಾಳಿಗೆ, ‘‘ಪರವಾಗಿಲ್ಲ ಆಂಟಿ, ನಾನು ಬಸ್ಸಲ್ಲೇ ಕುಳಿತಿರುತ್ತೇನೆ, ನೀವು ಬ್ಯಾಗ್ ಬಿಟ್ಟು ಹೋಗಿ’’ ಅಂದನಂತೆ!! ಗೀತಾ ಕಕ್ಕಾಬಿಕ್ಕಿಯಾಗಿ ಬಸ್ಸಿನಿಂದ ಇಳಿದು ಹೋದರೂ ಸುಮಾರು ಹೊತ್ತು ಆಕೆಗೆ ಆಂಟಿ ಶಬ್ದ ಮನಸ್ಸಲ್ಲೇ ರಿಂಗಣಿಸುತ್ತಿತ್ತು. ತನ್ನನ್ನು ಆಂಟಿ ಹೇಳುವ ಗಂಡಸಾದರೂ ಯಾರು? ಮೊನ್ನೆಯಷ್ಟೇ ಪರಿಚಿತನಾಗಿರುವ, ತಲೆಯ ಮುಂದಿನ ಕೂದಲ್ಲೆಲ್ಲಾ ಉದುರಿ. ಕಿವಿಯ ಬಳಿ ಮಾತ್ರ ಸ್ವಲ್ಪ ಉಳಿದಿರುವ, ಕಣ್ಣಿಗೆ ದಪ್ಪ ಕನ್ನಡಕ ಹಾಕಿಕೊಂಡಿರುವ, 6 ತಿಂಗಳ ಗರ್ಭಿಣಿಯಂತೆ ಹೊಟ್ಟೆ ಊದಿಕೊಂಡಿರುವವ!! ಮನಸಲ್ಲೇ ಒಂದು ರೂಪುರೇಷೆ ಸಿದ್ಧಪದಡಿಸಿಕೊಂಡ ಗೀತಾ ಸಂಜೆಯ ತನಕ ಅವಕಾಶಕ್ಕಾಗಿ ಕಾದು ಕುಳಿತಳು. ಸಂಜೆ ಕಾಫಿಗೆ ಹೋಟೆಲ್ ಬಳಿ ಬಸ್ ನಿಂತಾಗ, ಒಂದೇ ಟೇಬಲಲ್ಲಿ ಕುಳಿತರು ಇವರೆಲ್ಲಾ. ವೈಟರ್ ಬಂದಾಗ ತಕ್ಷಣ ಗೀತಾ ‘‘ಅಂಕಲ್ ನಿಮಗೆ ಕಾಫಿಯಾ, ಟೀಯಾ’’ ಅಂದಳು. ಆತನ ಮುಖ ತಕ್ಷಣ ಗಂಭೀರವಾಯಿತು. ‘‘ನಾನು ಅಂಕಲ್ ಅಲ್ಲ, ನನ್ನ ಹೆಸರು ರಾಘವ್’’ ಅಂದ ಮುಗುಮ್ಮಾಗಿ! ಗೀತಾ ಹಾಯಾಗಿ ನಗುತ್ತಾ, ‘‘ಅಯ್ಯೋ ಹಾಗೆಲ್ಲಾ ಹಿರಿಯರನ್ನು ಹೆಸರಲ್ಲಿ ಕರೆಯೊಕಾಗುತ್ತಾ ಅಂಕಲ್’’ ಅಂದಾಗ ಮುಂದೆ ಪೂರ ಟೂರ್‌ನಲ್ಲಿ ಈ ರಾಘವ್ ಅಂಕಲ್ ಗೀತಾಳ ಹತ್ರ ಮಾತನಾಡಲೇ ಇಲ್ಲ!!

ಗೀತಾ, ವಾಣಿ ಮತ್ತು ನಾನು ಸುಮಾರು ಒಂದೇ ಪ್ರಾಯದವರು. ಈ ಪ್ರಸಂಗ ಕೇಳಿ ಚೆನ್ನಾಗಿ ನಕ್ಕೆವು. ವಾಣಿ ನನಗೂ ಇಂಥದ್ದೇ ಸನ್ನಿವೇಶ ಎದುರಾಗಿತ್ತು ಕಣ್ರೆ ಅಂದಾಗ ಹೇಳು, ಹೇಳು ಎನ್ನುತ್ತಾ ನಾವು ಅವಳ ಮುಂದೆ ಕುಳಿತೆವು.

 ‘‘ನನ್ನ ಪತಿಗೆ ಸರ್ವೀಸಿನ ಕೊನೆಯ ಎರಡು ವರ್ಷ ಊರಿಗೇ ಟ್ರಾನ್ಸ್ ಫರ್ ಸಿಕ್ಕಾಗ ತುಂಬಾ ಖುಷಿಯಿಂದ ಬಂದೆವು. ಪಕ್ಕದ ಮನೆಯ ದಂಪತಿಯರ ಎರಡೂ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹಾಸ್ಟೆಲ್‌ನಲ್ಲಿದ್ದರು, ಥೇಟ್ ನಮ್ಮ ಮಕ್ಕಳಂತೆ. ನಾನು ನನ್ನದೇ ಪ್ರಾಯದವಳಲ್ವಾಂತ ಸಲಿಗೆಯಿಂದ ಮಾತನಾಡಿಸುತ್ತಿದ್ದೆ. ಒಮ್ಮೆ ಅವಳ ಮನೆಗೆ ಹೋದಾಗ ಬನ್ನಿ ಆಂಟಿ ಅಂತ ಸ್ವಾಗತಿಸೋದೆ?!! ನಾನೂ ಬಿಡಲಿಲ್ಲ ಅಂಕಲ್ ಎಲ್ಲಿ ಕಾಣಿಸ್ತಾಯಿಲ್ಲ ಅಂದೆ. ಆಗ ತಕ್ಷಣವೇ ಹೊರಬಂದ ಆ ಗಂಡಸು ಅಯ್ಯೋ ಆಂಟಿ ನನಗೆ ಅಂಕಲ್ ಎನ್ನಬೇಡಿ, ನೀವು ಹಿರಿಯರು ಅಂದ ಗಂಭೀರವಾಗಿ. ಮತ್ತೆ ನೀವು ನನಗಿಂತ ದೊಡ್ಡವರ ತರ ಕಾಣ್ತೀರಲ್ಲ? ನಿವೃತ್ತಿಯಾಗಲು ಹತ್ರ ಬಂತಲ್ಲ ನಿಮಗೂ ಅಂದೆ ಬೇಕಂತ. ನನಗೆ ಇನ್ನೂ 48 ಅಷ್ಟೆ ಅಂದ.

 ನನಗೂ ಅಷ್ಟೆ! ನಿಮ್ಮ ಮಕ್ಕಳು ನನ್ನನ್ನು ಆಂಟಿ ಅಂತ ಕರೆದರೆ ಪರವಾಗಿಲ್ಲ, ನೀವು ನನ್ನನ್ನು ಆಂಟಿ ಅಂದರೆ ಯಾಕೋ ಸರಿ ಅನಿಸುವುದಿಲ್ಲ ಎಂದೆ ಗಂಭೀರವಾಗಿ. ಅದಕ್ಕೆ ಆತ ಏನೂ ಹೇಳದೆ ಸುಮ್ಮನಾದ. ಆದರೆ ಮತ್ತೆ ಮರುದಿನ ಕಾರಿಡಾರಿನಲ್ಲಿ ಸಿಕ್ಕಾಗ ಎಲ್ಲರ ಮುಂದೆಯೇ,

ಆಂಟಿ ಹೇಗಿದ್ದೀರಿ? ಎಂದು ಮತ್ತೆ ನಾಲಿಗೆ ಕಚ್ಚಿ,

 ಸಾರಿ, ಆಂಟಿ ಹೇಳ್ಬಾರದಲ್ಲ ನಿಮಗೆ? ಅಂತ ವಕ್ರ ನಗೆ ಬೀರಿದವನ್ನು ಕಂಡು ನನಗೆ ಸಿಟ್ಟು ನೆತ್ತಿಗೇರಿ,

ಅಯ್ಯೋ ಪರವಾಗಿಲ್ಲ ಅಂಕಲ್, ಹಾಗೆ ಕರೀರಿ ಅಂಕಲ್ ಅಂತಾ ಆತನಿಗೆ ಎರಡು ಅಂಕಲ್‌ಗಳನ್ನು ದಯಪಾಲಿಸಿ ಸಮಾಧಾನಗೊಂಡೆ. ನಾವು ನಕ್ಕುಬಿಟ್ಟೆವು. ಆದರೆ ನಕ್ಕುಬಿಡುವಂತಹ ವಿಷಯವಲ್ಲ ಇದು ಎಂದು ನಮಗೆಲ್ಲ ಅನಿಸಿತ್ತು. ಏನೋ 20-25 ರ ಪ್ರಾಯದ ಮಕ್ಕಳು ನಮ್ಮನ್ನು ಆಂಟಿ ಅಂದರೆ ಏನೂ ಬೇಜಾರಿಲ್ಲ. ಅಥವಾ ಸಣ್ಣಂದಿನಿಂದಲೇ ನಾವು ಎತ್ತಿ ಆಡಿಸಿದ ಮಕ್ಕಳು ಉದಾಹರಣೆಗೆ ನಮ್ಮ ಅಕ್ಕನ, ತಂಗಿಯ, ಅಣ್ಣನ, ತಮ್ಮನ ಮಕ್ಕಳು ನಮ್ಮನ್ನು ಆಂಟಿ ಎಂದಾಗಲೂ ಎನೂ ಬೇಜಾರಿಲ್ಲ. ಅಲ್ಲಿ ಆತ್ಮೀಯತೆ ಇದೆ. ಗೌರವ ಇದೆ, ಪ್ರೀತಿ ಇದೆ. ಅದು ಬಿಟ್ಟು ಸುಮಾರಾಗಿ ಅಪರಿಚಿತರಾಗಿಯೇ ಇರುವ ಮಧ್ಯವಯಸ್ಕರೂ ತಮ್ಮನ್ನು ಇನ್ನೂ ಯಂಗ್ ಎಂದು ಭಾವಿಸಿ ತಮ್ಮದೇ ಪ್ರಾಯದ ಹೆಂಗಸರನ್ನು ಮಾತ್ರ ಮುದುಕಿಯರು ಎಂದು ಭಾವಿಸುವುದೇಕೋ?? ಅಪರಿಚಿತರಾದ ಸ್ತ್ರೀಯರನ್ನು ಮೇಡಂ ಅನ್ನಬಹುದಲ್ವೇ? ಪರಿಚಿತರಾದ್ರೆ ಆತ್ಮೀಯವಾಗಿ ಅಕ್ಕಾ ಎಂದರೆ ಮನಸ್ಸಿಗೆ ಎಷ್ಟು ಹಿತವಾಗಿರುತ್ತದೆ. ಈಗಂತೂ ಸಣ್ಣ ಮಕ್ಕಳು ಎಲ್ಲರನ್ನೂ ಆಂಟಿ ಅಂಕಲ್ ಎಂದೇ ಮಾತನಾಡಿಸುತ್ತಾರೆ. ಸಣ್ಣಮಕ್ಕಳು ಏನು ಹೇಳಿದರೂ ಚಂದವೇ!! ಹಾಗಂತ ತಲೆ ನೆರೆತ ಗಂಡಸರೂ ಹೇಳಿದರೆ ??!!

share
ಶಾಂತಲಾ ರಾವ್, ಬೋಳಾರ
ಶಾಂತಲಾ ರಾವ್, ಬೋಳಾರ
Next Story
X