ಸಾತ್ವಿಕ್‌ಸಾಯಿರಾಜ್- ಚಿರಾಗ್ ಶೆಟ್ಟಿಗೆ ಥಾಯ್ಲೆಂಡ್ ಡಬಲ್ಸ್ ಕಿರೀಟ

ಬ್ಯಾಂಕಾಕ್, ಆ.4: ಭಾರತದ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್ ಟೂರ್ನಮೆಂಟ್‌ನ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ರವಿವಾರ ಇಲ್ಲಿ ನಡೆದ ಬಿಡಬ್ಲುಎಫ್ ಸೂಪರ್ 500 ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾದ ಲೀ ಜುನ್ ಹ್ಯೂ ಮತ್ತು ಲ್ಯು ಯು ಚೆನ್‌ರನ್ನು 21-19, 18-19, 21-18 ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಭಾರತದ ಪರ ಡಬಲ್ಸ್‌ನಲ್ಲಿ ಚೊಚ್ಚಲ ಸಾಧನೆ ಮಾಡಿದ್ದಾರೆ.
ಶ್ರೇಯಾಂಕರಹಿತ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೂರನೇ ಶ್ರೇಯಾಂಕದ ಚೀನಾದ ಜೋಡಿಯನ್ನು 1 ಗಂಟೆ ಮತ್ತು 2 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಸೋಲಿಸಿ 2019ರಲ್ಲಿ ಮೊದಲ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
Next Story





