ಆವರ್ಸೆ ಗ್ರಾಪಂನಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
ಉಡುಪಿ, ಆ.4: ಗ್ರಾಪಂ ಮಟ್ಟದ ಕರ್ನಾಟಕ ಅಭಿವೃದ್ದಿ ಕಾಮಗಾರಿಗಳ (ಕೆಡಿಪಿ) ಪ್ರಥಮ ಹಂತದ ತ್ರೈಮಾಸಿಕ ಸಭೆಯು ಗುರುವಾರ ಆವರ್ಸೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆವರ್ಸೆ ಗ್ರಾಪಂ ಅಧ್ಯಕ್ಷ ಎಚ್. ಪ್ರಮೋದ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಪಂ ಅಧ್ಯಕ್ಷರು ಎಲ್ಲಾ ಇಲಾಖಾಧಿಕಾರಿಗಳು ಸಾಧಿಸಿದ ಗುರಿಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು. ಎಲ್ಲಾ ಇಲಾಖಾಧಿಕಾರಿಗಳು ಅವರವರ ಇಲಾಖೆಯಿಂದ ಸಾಧಿಸಿರುವ ಗುರಿ ಹಾಗೂ ಸಾಧನೆಯ ಬಗ್ಗೆ ವಿವರಿಸಿ ಬಳಿಕ, ಈ ಬಗ್ಗೆ ಚರ್ಚೆ ನಡೆಯಿತು.
ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಸೀತಾರಾಮ ಆಚಾರ್ ಕೆಡಿಪಿ ಸಬೆಯ ಮಹತ್ವದ ಬಗ್ಗೆ ವಿವರಿಸಿದರು. ಸಭೆಯಲ್ಲಿ ಕೃಷಿ ಇಲಾಖೆಯ ಚಂದ್ರಶೇಖರ ಶೆಟ್ಟಿ, ಶಿಕ್ಷಣ ಇಲಾಖೆಯಿಂದ ಸ.ಪ್ರೌ.ಶಾಲೆ ಆವರ್ಸೆ ಮುಖ್ಯ ಶಿಕ್ಷಕ ರಮೇಶ್ ಕುಲಾಲ್ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿ ಗಳು ಉಪಸ್ಥಿತರಿದ್ದರು. ಪಿಡಿಓ ಸೀತಾಾಮ ಆಚಾರ್ ಸ್ವಾಗತಿಸಿ, ವಂದಿಸಿದರು.
Next Story





