ಪಿಲಿಕುಳದಲ್ಲಿ ಆಟಿ ಆಚರಣೆಯ ಸಂಭ್ರಮದಲ್ಲಿ ತುಳುನಾಡಿನ ಖಾದ್ಯಗಳ ಉತ್ಸವ

ಮಂಗಳೂರು : ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮದ ಗುತ್ತಿನ ಮನೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಟಿಕೂಟ 2019 ಕಾರ್ಯಕ್ರಮ ಸಾಂಪ್ರದಾಯಿಕ ಆಟಿ ಆಚರಣೆಗಳೊಂದಿಗೆ ತುಳುನಾಡಿನ ಖಾದ್ಯಗಳ ಉತ್ಸವ ನಡೆಯಿತು.ಈ ಬಾರಿಯ ಆಟಿ ಆಚರಣೆ ಯಾವೂದೇ ಔಪಚಾರಿಕ ಕಾರ್ಯಕ್ರಮಗಳಿಲ್ಲದೆ ಜನರು ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ತಯಾರಿಸುವ ಖಾದ್ಯಗಳ ರುಚಿಯನ್ನು ತಿಂದು ಚಪ್ಪರಿಸುವ ಮೂಲಕ ಆಟಿ ಆಚರಣೆ ತುಳುನಾಡಿನ ಖಾದ್ಯಗಳ ಉತ್ಸವ ನಡೆಯಿತು.
ಪಿಲಿಕುಳದ ಗುತ್ತಿನ ಮನೆಯಲ್ಲಿ ದೀಪಬೆಳಗಿಸಿ ಪಿಲಿಕುಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೆಘನಾ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.
ಬಳಿಕ ಗುತ್ತಿನ ಮನೆಯ ಎದರು ಹಾಕಿದ್ದ ರಂಗಸ್ಥಳದಲ್ಲಿ ಸೀತಾರಾಮ ಕುಮಾರ್ ಮತ್ತು ಬಳಗದವರಿಂದ ಯಕ್ಷ ನೃತ್ಯ ಮತ್ತು ಹಾಸ್ಯವೈಭವ ಕಾರ್ಯಕ್ರಮ ನಡೆಯಿತು. ಸಮಾರಂಭಕ್ಕೆ ಆಗಮಿಸಿದ ಉಮಾನಾಥ ಕೋಟ್ಯಾನ್,ಪಿಲಿಕುಳದ ಆಡಳಿತಾಧಿಕಾರಿ ಬಾಬು ದೇವಾಡಿಗ, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಚ್ಮೀ ಶೆಟ್ಟಿ,ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಕಲಾವಿದರನ್ನು ಸನ್ಮಾನಿಸಿದರು.
ಆಟಿ ಕೂಟದಲ್ಲಿ ತುಳುನಾಡಿನ ಖಾದ್ಯಗಳ ವೈಭವ
ಆಟಿ ಕೂಟದಲ್ಲಿ ತುಳುನಾಡಿನ ಅತಿಥಿಗಳನ್ನು ಬೆಲ್ಲ ನೀರಿನೊಂದಿಗೆ ಆರಂಭದ ಸ್ವಾಗತ ಮಾಡಿದ ಬಳಿಕ ತುಳು ನಾಡಿನ ಖಾದ್ಯಗಳಾದ ಗುರಿಯಪ್ಪ,ಗಾರಿಗೆ,ಪತ್ರೊಡೆ,ಪೆಲಕಾಯಿಗಟ್ಟಿ,ಗೆಂಡದ ಟಡ್ಯೆ,ಮಂಜಲ್ ಇರೆತ ಗಟ್ಟಿ,ತೆಕ್ಕರೆದ ಅಡ್ಯೆ,ತಜಂಕ್‌ದಂಬಡೆ,ಅರಿತ ಉಂಡೆ ಆರಂಭದಲ್ಲಿ ನೀಡಲಾಯಿತು.
ಬಳಿಕ ಮಧ್ಯಾಹ್ನ ಊಟಕ್ಕೆ ತುಳು ನಾಡಿನ ಸಾಂಪ್ರದಾಯಿಕ ಊಟದೊಂದಿಗೆ ವಿಶೇಷ ಪಲ್ಯ ಸಿಹಿಗಳನ್ನು ಮಾಡಲಾಗಿತ್ತು. ಆಟಿಕೂಟದ ಬೋಜನ ವಿಶೇಷ ಖಾದ್ಯಗಳಾದ ಲಿಂಬೆದ ಉಪ್ಪುಡ್(ಲಿಂಬೆಯ ಉಪ್ಪಿನ ಕಾಯಿ),ತೆಕ್ಕರೆ ಪಚ್ಚಡಿ(ಮುಳ್ಳು ಸೌತೆ ಪಚ್ಚಡಿ),ನೀರುಕುಕ್ಕು ಚಟ್ನಿ (ಉಪ್ಪು ನೀರಲ್ಲಿ ಸಂಗ್ರಹಿಸಿದ್ದ ಮಾವಿನಕಾಯಿ ಚಟ್ನಿ) ಉಪ್ಪಡ್ ಪಚ್ಚಿಲ್ ಚಟ್ನಿ (ಉಪ್ಪು ನೀರಿನಲ್ಲಿ ಸಂಗ್ರಹಿಸಿದ್ದ ಹಲಸಿನಕಾಯಿ ಚಟ್ನಿ), ಪತ್ರೊಡೆ (ಕೆಸುವಿನ ಎಲೆಯ ಖಾದ್ಯ ) ಪೆಲತ್ತ ಇರೆತ ಕೊಟ್ಟಿಗೆ (ಹಲಸಿನ ಎಲೆಯಲ್ಲಿ ಬೇಯಿಸಿದ ತಿಂಡಿ),ಕಂಚಲ ಅಂಬಡೆ ಮೆಣಸ್‌ಕಾಯಿ (ಹಾಗಲಕಾ ಅಂಬಟೆಕಾಯಿ ಮೆಣಸಿನಕಾಯಿಪಲ್ಯ ), ಕಣಿಲೆ ಮುಂಗೆ ಪದೆಂಗಿ ಗಸಿ(ಎಳೆ ಬಿದಿರು ಹಾಗೂ ಮೊಳಕೆ ಬರಿಸಿದ ಹೆಸರು ಕಾಳಿನ ಪಲ್ಯ), ನುರ್ಗೆತಪ್ಪು (ನುಗ್ಗೆ ಸೊಪ್ಪು ಪಲ್ಯ),ಪೆಲತರಿ ಸುಕ್ಕ (ಹಲಸಿನ ಕಾಯಿ ಬೀಜದ ಸುಕ್ಕ )ಸಾರ್ನಡ್ಡೆ ಪಾಯಿಸಾ, ತೇವು ತೇಟ್ಲ, ಪದ್ಪೆ, ತೇವುದ ದಂಡ್ ಅಂಬಟೆ ಸಾರ್, ತಜಂಕ್ ವಡೆ, ಕರಕುಂಬುಡ ಪುಳಿ ಕೊದ್ದೆಲ್, ಕುಡು ಸಾರ್, ಮುಂಚಿಪೋಡಿ, ಚಟ್ಟಂಬಡೆ, ಪೆಲಕಾಯಿ ಗಾರಿಗೆ, ಗುಜ್ಜೆದ ಹಪ್ಪಳ, ಕೊಜಪ್ಪು, ಅಲೆ ಸೇರಿದಂತೆ ಕುಚ್ಚ್ಲು ಹಾಗೂ ಬೆಳ್ತಿಗೆ ಅಕ್ಕಿಯ ಅನ್ನ ಆಟಿ ಕೂಟದ ಬೋಜನ ವಿಶೇಷವಾಗಿತ್ತು. ಮಳೆ ಬಿಡುವು ನೀಡಿದ್ದ ಕಾರಣ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಆಟಿ ಕೂಟಕ್ಕೆ ಜನಸೇರಿದ್ದರು.







