ಉಡುಪಿ ಜಿಲ್ಲೆಯಾದ್ಯಂತ ನಾಗರಪಂಚಮಿ ಆಚರಣೆ

ಉಡುಪಿ, ಆ. 5: ಉಡುಪಿ ಜಿಲ್ಲೆಯಾದ್ಯಂತ ನಾಗರ ಪಂಚಮಿಯನ್ನು ಶ್ರದ್ಧೆ ಹಾಗೂ ಕ್ತಿಯಿಂದ ರವಿವಾರ ಆಚರಿಸಲಾಯಿತು.
ಜಿಲ್ಲೆಯಲ್ಲಿನ ನಾಗಸ್ಥಾನ, ಮೂಲನಾಗಸ್ಥಾನ, ದೇಗುಲಗಳಿಗೆ ತೆರಳಿದ ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಹಿಂಗಾರ, ಅರಶಿನ, ಕೇದಗೆ, ಕೆಂದಾಳಿ ಸೀಯಾಳ ಅಭಿಷೇಕವನ್ನು ಅರ್ಪಿಸಿದರು.
ಉಡುಪಿ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ನಾಗದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಸಹಸ್ರಾರು ಭಕ್ತಾಧಿಗಳು ಸೇವೆಗಳನ್ನು ನೀಡಿ ದೇವರ ದರ್ಶ ಪಡೆದು ಪ್ರಸಾದ ಸ್ವೀಕರಿಸಿದರು.
ಸಗ್ರಿ ವಾಸುಕೀ ಸುಬ್ರಹ್ಮಣ್ಯ, ಬಡಗಪೇಟೆ ವಾಸುಕಿ ಅನಂತ ಪದ್ಮನಾಭ, ಉಡುಪಿಯ ಮಾಂಗೋಡು, ತಾಂಗೋಡು, ಮುಚ್ಲುಕೋಡು, ಅರಿತೋಡು, ಮಣಿಪಾಲ ಸರಳಬೆಟ್ಟು ಶ್ರೀಉಮಾಮಹೇಶ್ವರಿ, ಕಕ್ಕುಂಜೆ ಇಷ್ಟ ಸಿದ್ದಿ ವಿನಾಯಕ ದೇವಸ್ಥಾನ ಗಳಲ್ಲಿ ನಾಗರ ಪಂಚವಿು ವೈಭವದಿಂದ ಸಂಪನ್ನಗೊಂಡಿತು.
Next Story





