ಉಡುಪಿ: ನಾಗರಪಂಚಮಿ ಆಚರಣೆಯಲ್ಲಿ ಡೆಂಗ್ಯು ಕುರಿತು ಜಾಗೃತಿ

ಉಡುಪಿ, ಆ.5: ಗುಂಡಿಬೈಲು ಸಮೀಪದ ಪಾಡಿಗಾರು ಶ್ರೀನಾಗದೇವರ ಮತ್ತು ರಕ್ತೇಶ್ವರಿ ಸನ್ನೀಧಾನದಲ್ಲಿ ನಾಗರ ಪಂಚಮಿ ಆಚರಣೆಯೊಂದಿಗೆ ಡೆಂಗ್ಯು ಹಾಗೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಯಿತು.
ಭಕ್ತರು ದೇವರಿಗೆ ಅಭಿಷೇಕ ಮಾಡಲು ತರುವ ಬೊಂಡಗಳ ಚಿಪ್ಪುಗಳು ಸೊಳ್ಳೆಯ ಉತ್ಪತ್ತಿಯ ತಾಣಗಳಾಗಿರುವುದರಿಂದ ಅಭಿಷೇಕದ ಬಳಿಕ ಆ ಬೊಂಡಗಳಿಗೆ ತೀರ್ಥ ತುಂಬಿಸಿ ಅವುಗಳನ್ನು ಭಕ್ತರಿಗೆ ಕೊಡಲಾಯಿತು. ಭಕ್ತರು ಅದನ್ನು ಮನೆಗೆ ತೆಗೆದುಕೊಂಡು ಹೋಗಿ ವಿಲೆೀವಾರೀ ಮಾಡುವಂತೆ ತಿಳಿಸಲಾಗಿತ್ತು.
ಅರ್ಚಕ ವಿಷ್ಣುಪ್ರಸಾದ್ ಪಾಡೀಗಾರ್, ಬೊಂಡದ ಚಿಪ್ಪಿನಲ್ಲ ನೀರು ನಿಂತರೆ ಸೊಳ್ಳೆ ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯುನಂತಹ ಸಾಂಕ್ರಾಮಿಕ ರೋಗ ಗಳು ಹರಡುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರು. ಮನೆಯಲ್ಲೂ ಬೊಂಡದ ಚಿಪ್ಪುನಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು ಎಂದು ಭಕ್ತರಲ್ಲಿ ಅವರು ಮನವಿ ಮಾಡಿದರು.
Next Story





