ಆ.15: ಜಿಲ್ಲಾಮಟ್ಟದ ದೇಶಭಕ್ತಿಗೀತೆ ಸ್ವರ್ಧೆ
ಉಡುಪಿ, ಆ.5: ಮಣಿಪಾಲ ಕರೋಕೆ, ಮಣಿಪಾಲ ರೋಟರಿ ಹಿಲ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ದೇಶಭಕ್ತಿಗೀತೆ ಸ್ವರ್ಧೆಯು ಆ.15ರಂದು ಅಪರಾಹ್ನ 3.30ಕ್ಕೆ ಮಣಿಪಾಲ ರೋಟರಿ ಹಾಲ್ನಲ್ಲಿ ಆಯೋಜಸಲಾಗಿದೆ.
5 ರಿಂದ 15ವರ್ಷ ಮತ್ತು 15ವರ್ಷ ಮೇಲ್ಪಟ್ಟವರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ವಿವವರಗಳಿಗಾಗಿ ಕಾರ್ಯಕ್ರಮ ಸಂಘಟರಾದ ಉಮೇಶ್ ಸಾಲಿಯಾನ್(9844627000) ಅಥವಾ ಉಮೇಶ್ ಮಣಿಪಾಲ್(8970494663) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





