ಆ.9ರಂದು ‘ಬೆಲ್ಚಪ್ಪ’ ತುಳು ಚಿತ್ರ ಬಿಡುಗಡೆ
ಉಡುಪಿ, ಆ.5: ಜಯದುರ್ಗಾ ಪ್ರೊಡೆಕ್ಷನ್‌ನಲ್ಲಿ ನಿರ್ಮಾಣಗೊಂಡ ‘ಬೆಲ್ಚಪ್ಪ’ ತುಳುಚಿತ್ರ ಆ.9ರಂದು ಉಡುಪಿ ಮತ್ತು ಮಂಗಳೂರಿನ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಉಡುಪಿಯ ಕಲ್ಪನಾ ಚಿತ್ರಮಂದಿರ, ಕಾರ್ಕಳದ ಪ್ಲಾನೆಟ್ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳಾದ ಮಣಿಪಾಲದ ಅಯನಾಕ್ಸ್ ಹಾಗೂ ಭಾರತ್ ಸಿನಿಮಾಸ್‌ನಲ್ಲಿ ಬೆಲ್ಚಪ್ಪ ತೆರೆ ಕಾಣಲಿದೆ. ಮಂಗಳೂರಿನ ಜ್ಯೋತಿ, ಮೂಡ ಬಿದರೆಯ ಅಮರಶ್ರೀ ಹಾಗೂ ಸಿನೆ ಪೋಲೀಸ್ ಮತ್ತು ಭಾರತ್ ಸಿನಿಮಾಸ್ ನಲ್ಲಿಯೂ ಬಿಡುಗಡೆಗೊಳ್ಳಲಿದೆ ಎಂದು ರತ್ನಾಕರ್ ಇಂದ್ರಾಳಿ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಬೆಲ್ಚಪ್ಪಚಿತ್ರಕ್ಕೆ ಕಥೆ- ಚಿತ್ರಕಥೆ-ಸಂಭಾಷಣೆ-ನಿರ್ದೇಶನವನ್ನು ನೀಡಿರುವ ರಜನೀಶ್ ದೇವಾಡಿಗ, ನಾಯಕನಾಗಿಯೂ ನಟಿಸಿದ್ದಾರೆ. ಅರವಿಂದ ಬೋಳಾರ್ ಮುಖ್ಯ ಭೂಮಿಕೆ ನಟಿಸಿದ್ದು ಚಿತ್ರದ ಕೇಂದ್ರಬಿಂದುವಾಗಿದ್ದಾರೆ. ನಾಯಕಿಯಾಗಿ ಯಶಸ್ವಿ ದೇವಾಡಿಗ, ಸುಕನ್ಯ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸಂಗೀತ ನಿರ್ದೇಶನವನ್ನು ವಿಕ್ರಂ ಸೆಲ್ವ ನೀಡಿದ್ದಾರೆ. 14 ದಿನದಲ್ಲಿ ಹಾಡು ಸಹಿತ ಚಿತ್ರಿಕರಣ ಮುಗಿಸಿದ ದಾಖಲೆಯನ್ನ ಬೆಲ್ಚಪ್ಪ ಚಿತ್ರ ತಂಡ ಮಾಡಿದೆ. ಚಿತ್ರದ ಚಿತ್ರೀಕರಣ ಉಡುಪಿಯ ಆಸುಪಾಸಿ ನಲ್ಲೇ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭರತ್ ಕುಮಾರ್, ಪಲ್ಲವಿ ಸಂತೋಷ್, ಸಂತೋಷ್ ಶೆಟ್ಟಿ ಮಿಜಾರ್, ಮನೀಷ್ ಉಪಸ್ಥಿತರಿದ್ದರು.







