ಪಾವೂರು: ಸಿಡಿಲು ಬಡಿದು ಮನೆಗಳಿಗೆ ಹಾನಿ

ಕೊಣಾಜೆ: ಪಾವೂರು ಗ್ರಾಮದ ಅಕ್ಷರನಗರದಲ್ಲಿ ಸೋಮವಾರ ಸಿಡಿಲಿನ ಅಬ್ಬರಕ್ಕೆ ಮನೆಗಳು ಮತ್ತು ತೆಂಗಿನ ಮರಗಳಿಗೆ ಹಾನಿಯುಂಟಾದ ಘಟನೆ ನಡೆದಿದೆ.
ಮನೆಗಳಿಗೆ ಸಿಡಿಲು ಬಡಿದ ಪರಿಣಾಮ ಇಲ್ಲಿರುವ ಆರು ಮನೆಗಳ ಇನ್ವರ್ಟರ್‍ಗಳು ಹಾನಿಯಾಗಿದ್ದರೆ, ಮನೆಯೊಂದರ ಸ್ವಿಚ್ ಬೋರ್ಡ್ ಹಾಗೂ ಪ್ಯಾನ್‍ಗಳಿಗೆ ಹಾನಿಯಾಗಿದೆ. ಅಹ್ಮದ್ ಕುಂಞಿ ಎಂಬವರ ಮನೆಯ ಗೋಡೆಗೆ ಹಾನಿಯಾಗಿದ್ದು ರಂದ್ರ ಕಾಣಿಸಿಕೊಂಡಿದೆ. ಸಿಡಿಲು ಬಂದ ಸಂದರ್ಭದಲ್ಲಿ ಅಹ್ಮದ್ ಕುಂಞಿ ಅವರ ಮೊಮ್ಮಗನ ಕೈಯ್ಯಲಿದ್ದ ಕೊಡೆ ಸಿಡಿಲಿನ ತೀಕ್ಷ್ಣತೆಗೆ ಸಂಪೂರ್ಣ ಕರಕಲಾಗಿದ್ದು, ಕೆಲವೊಂದು ಭಾಗಗಳು ಕೈಯ್ಯಲ್ಲಿಯೇ ಉಳಿದಿದ್ದು ಬಾಲಕ ಅಪಾಯವಿಲ್ಲದೆ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಂಝ ಎಂಬವರ ಮನೆಯ ಹಿಂಭಾಗದ ಗುಡ್ಡ ಕುಸಿದಿದ್ದು ಸಿಡಿಲಿಗೆ ಮನೆಯ ಇನ್ವರ್ಟರ್‍ಗೂ ಹಾನಿಯಾಗಿದೆ.
Next Story





