ಪಶುಸಂಗೋಪನೆ: ಸಹಾಯಧನಕ್ಕೆ ಅರ್ಜಿ ಆಹ್ವಾನ
ಉಡುಪಿ, ಆ.5: ಜಿಲ್ಲೆಯಲ್ಲಿ ಇಲಾಖಾ ವತಿಯಿಂದ ಅನುಷ್ಠಾನಗೊಳಿಸ ಲಾಗುತ್ತಿರುವ ವಿವಿಧ ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ವಿವಿಧ ಘಟಕಗಳಿಗೆ(ಮಹಿಳೆಯರಿಗಾಗಿ ಪಶುಸಂಗೋಪನೆ, ಹೈನುಗಾರಿಕೆ, ಆಡು/ಮೇಕೆ ಘಟಕ/ 3 ಆಡು ಘಟಕ) ಸಹಾಯಧನಕ್ಕಾಗಿ ನಿಯಮಾನುಸಾರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಹಾಯಧನ ಪಡೆಯುವ ಫಲಾನುಭವಿಗಳು ಫ್ರೂಟ್ಸ್ ನೋಂದಾವಣೆ ಪಡೆದಿರುಬೇಕು. ಆಸಕ್ತ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸಮೀಪದ ಪಶುವೈದ್ಯಕೀು ಸಂಸ್ಥೆಗಳಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಪಶುವೈದ್ಯಕೀಯ ಆಸ್ಪತ್ರೆ, ಉಡುಪಿ ದೂರವಾಣಿ ಸಂಖ್ಯೆ: 0820-2520659, ಕುಂದಾಪುರ ದೂರವಾಣಿ ಸಂಖ್ಯೆ:08254-230776, ಕಾರ್ಕಳ ದೂರವಾಣಿ ಸಂಖ್ಯೆ: 08258-230448 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ, ಅಗತ್ಯ ದಾಖಲಾತಿಗಳೊಂದಿಗೆ ಆ.31ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
Next Story





