ಮಂಗಳೂರು ಮಾಲ್ ವಲ್ಲಿ ಆತಂಕ ಸೃಷ್ಟಿಸಿದ ಬ್ಯಾಗ್!
ಮಂಗಳೂರು, ಆ.5: ನಗರದ ಪಾಂಡೇಶ್ವರದ ಮಾಲ್‌ವೊಂದರ ಕಾರು ಪಾರ್ಕಿಂಗ್ ಜಾಗದಲ್ಲಿ ಅನಾಥ ಬ್ಯಾಗೊಂದು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರವಿವಾರ ಮಾಲ್‌ಗೆ ಆಗಮಿಸಿದ ವ್ಯಕ್ತಿ ಕಾರಿನಲ್ಲಿ ರಕ್ತದೊತ್ತಡ (ಬಿಪಿ) ಪರೀಕ್ಷೆ ಮಾಡುವ ಸಾಧನದ ಬ್ಯಾಗ್ ತಂದಿದ್ದರು. ಆದರೆ ಮರಳಿ ಹೋಗುವಾಗ ಅದನ್ನು ಮಾಲ್‌ನ ಪಾರ್ಕಿಂಗ್ ಜಾಗದಲ್ಲೇ ಬಿಟ್ಟು ಹೋಗಿದ್ದರು.
ಸೋಮವಾರ ಬೆಳಗ್ಗೆ ಸೆಕ್ಯುರಿಟಿ ಸಿಬ್ಬಂದಿ ಪರಿಶೀಲನೆ ನಡೆಸುವಾಗ ಬ್ಯಾಗ್ ಕಂಡು ಬಂದಿದ್ದು ಇದರಿಂದ ಆತಂಕಿತರಾಗಿ ಪೊಲೀಸರಿಗೆ ತಿಳಿಸಿದರು. ಕೂಡಲೇ ಪೊಲೀಸರು ಆಗಮಿಸಿದರು, ಶ್ವಾನದಳ ಪರಿಶೀಲನೆ ನಡೆಸಿತು. ಯಾವುದೇ ಅಪಾಯಕಾರಿ ವಸ್ತುವಲ್ಲವೆಂದು ಖಚಿತವಾದ ಬಳಿಕ ಬ್ಯಾಗ್ ತೆರೆದು ನೋಡುವಾಗ ರಕ್ತದೊತ್ತಡ ಸಾಧನವಿತ್ತು. ಈ ಮೂಲಕ ಕೆಲಕಾಲದ ಆತಂಕ ನಿವಾರಣೆಯಾಗಿದೆ.
Next Story





