ಬಕ್ರೀದ್ ಆಚರಣೆಗೆ ಭದ್ರತೆ ನೀಡಲು ಸೆಂಟ್ರಲ್ ಕಮಿಟಿ ಮನವಿ
ಮಂಗಳೂರು, ಆ.5: ರಾಜ್ಯಾದ್ಯಂತ ಆ.12ರಂದು ಬಕ್ರೀದ್ ಆಚರಣೆ ನಡೆಯಲಿದೆ. ಈ ಹಬ್ಬವು ಸುಗಮವಾಗಿ ನಡೆಸಲು ಸೂಕ್ತ ಭದ್ರತೆ ನೀಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು ಎಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಸೆಂಟ್ರಲ್ ಕಮಿಟಿಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ರಾಜ್ಯದ ಪೊಲೀಸ್ ನಿರ್ದೇಶಕರಿಗೆ, ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಆಯುಕ್ತರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಕ್ತ ನಿರ್ದೇಶನ ನೀಡುವ ಭರವಸೆ ನೀಡಿದ್ದಾರೆ ಎಂದು ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





