ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್, ಸನ್ಮಾನ ಕಾರ್ಯಕ್ರಮ

ಮಂಗಳೂರು: ಆ. 5: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ದ.ಕ ಜಿಲ್ಲೆಯ 30 ಮದ್ರಸ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ ನೀಡುವ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಡಾ. ಕೆಂ. ಎಂ. ಶಾಹ್ ಮುಸ್ಲಿಯಾರ್ ವೇದಿಕೆಯಲ್ಲಿ ಜರುಗಿತು.
ಸಯ್ಯದ್ ಹಬೀಬುಲ್ಲಾ ಪೂಕೋಯಾ ತಂಙಳ್ ದುಅ ನೆರೆವೇರಿಸಿದರು ಹಾಗೂ ಇರ್ಷಾದ್ ದಾರಿಮಿ ಮಿತ್ತಬೈಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮುಹಮ್ಮದ್ ನಝೀರ್, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ, ಬಿ.ಎ. ಖಾದರ್ ಶಾ, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ದ.ಕ, ಮುಹಮ್ಮದ್ ಅಲಿ ಉಚ್ಚಿಲ್, ಅಧ್ಯಕ್ಷರು, ಬ್ಯಾರೀಸ್ ವೆಲ್ಫೇರ್ ಫೋರಮ್, ಅಬುಧಾಬಿ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಧ್ಯಕ್ಷರು, ಬಿಜೆಎಂ ಬೈಕಂಪಾಡಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಸದಸ್ಯರು, ಎಸ್.ಕೆ.ಐ.ಎಂ,ವಿ ಬೋರ್ಡು, ಅಬೂಬಕ್ಕರ್ ಸಿದ್ದೀಖ್, ಆಡಳಿತ ನಿರ್ದೇಶಕರು, ಸ್ನಾಕೀಸ್, ಶೇಖ್ ಮುಹಮ್ಮದ್ ಫಹದ್, ಆಡಳಿತ ನಿರ್ದೇಶಕರು, ಆಪ್ಟಿಕ್ ಗ್ಯಾಲಕ್ಷಿ, ಸುಲೈಮಾನ್ ಶೇಖ್ ಬೆಳುವಾಯಿ, ಟಿ.ಆರ್.ಎಫ್ ಸಲಹೆಗಾರ ಮೊದಲಾದವರು ಉಪಸ್ಥಿತರಿದ್ದರು.
ಟಿ.ಆರ್.ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ದಿಕ್ಸೂಚಿ ಭಾಷಣ ಮಾಡಿದರು.
ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಕುರ್ ಆನ್ ಅನುವಾದ ಮಾಡಿದ ಸಯ್ಯದ್ ಹಬೀಬುಲ್ಲಾ ಪೂಕೋಯಾ ತಂಙಳ್ ಮತ್ತು ಇರ್ಷಾದ್ ದಾರಿಮಿ ಮಿತ್ತಬೈಲು ರವರನ್ನು ಸನ್ಮಾನಿಸಲಾಯಿತು.
ತಮ್ಮ ಜೀವದ ಹಂಗನ್ನು ತೊರೆದು ನೂರಾರು ಜೀವಗಳನ್ನು ರಕ್ಷಿಸಿದ ಹಾಗೂ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಿದ ತಣ್ಣೀರುರುಬಾವಿ ಜೀವರಕ್ಷಕ ತಂಡದ ಸದಸ್ಯರಾದ ಎಂ ಜಾವೀದ್, ಮುಹಮ್ಮದ್ ಸಾದಿಕ್, ಝಾಕಿರ್ ಹುಸೈನ್, ಮುಹಮ್ಮದ್ ವಸೀಮ್, ಹಸನ್ ಪಿ.ಟಿ ಮತ್ತು ಸತೀಶ್ ಪಣಂಬೂರು ರವರಿಗೆ ಟ್ಯಾಲೆಂಟ್ ಜೀವರಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ತಮ್ಮ ಮದ್ರಸ ಪರಿಸರದಲ್ಲಿ ತರಕಾರಿ, ಹಣ್ಣುಹಂಪಲು ಮತ್ತು ಹೂದೋಟ ನಿರ್ಮಿಸಿ ಕೃಷಿಕ್ರಾಂತಿ ಮಾಡಿದ ಮುಹಮ್ಮದ್ ಶರೀಫ್ ಸಅದಿ, ಖತೀಬರು ಹಾಗೂ ಸದರ್ ಮುಅಲ್ಲಿಮ್, ರಹ್ಮಾನಿಯಾ ಜುಮಾ ಮಸೀದಿ ಮಂಜಲ್‍ಪಲ್ಕೆ ಇವರಿಗೆ ಟ್ಯಾಲೆಂಟ್ ಪರಿಸರ ಮಿತ್ರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿ ಸಲಹೆಗಾರ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ ಪ್ರಸ್ತಾವನೆಗೈದರು. ನಕಾಶ್ ಬಾಂಬಿಲ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಜಸೀಂ ಸಜಿಪ ವಂದಿಸಿದರು.
ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಪ್ರಶಸ್ತಿ ವಿಜೇತ 30 ಮದ್ರಸ ವಿದ್ಯಾರ್ಥಿಗಳಿಗೆ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.
ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ 2019 ವಿಜೇತರ ಪಟ್ಟಿ
5ನೇ ತರಗತಿ : ಫಾತಿಮಾ ನಿಶ್ಮಾ, ಬದ್ರಿಯಾ ಮದ್ರಸ ರೆಂಗೇಲ್, ಅಬ್ದುಲ್ಲಾ ರಿಶಾನ್, ನೂರುಲ್ ಹುದಾ ಮದ್ರಸ ಉಕ್ಕುಡ
ಮುಹಮ್ಮದ್ ರಮೀಝ್, ನೂರುಲ್ ಹುದಾ ಮದ್ರಸ ಉಕ್ಕುಡ, ಆಯಿಶಾ ಇನ್‍ಶಾ ಅರ್ಶ್, ಹಯಾತುಲ್ ಇಸ್ಲಾಂ ಮದ್ರಸ ಗೂಡಿನಬಳಿ, ಅಬ್ದುಲ್ ಹಸೀಬ್ ಎಸ್.ಕೆ, ನುಸ್ರತುಲ್ ಉಲೂಂ ಮದ್ರಸ ಸುರಿಬೈಲ್, ಫಾತಿಮತ್ ಅಸ್ರೀನಾ, ನೂರುಲ್ ಹುದಾ ಮದ್ರಸ ಉಕ್ಕುಡ, ಯು.ಎಸ್ ಹಿಬಾ ಫಾತಿಮಾ, ನೂರುಲ್ ಹುದಾ ಮದ್ರಸ ಉಕ್ಕುಡ, ಮುಹಮ್ಮದ್ ಖೈಸ್, ನೂರುಲ್ ಇಸ್ಲಾಂ ಮದ್ರಸ ಮಾಡನ್ನೂರು, ಫಾತಿಮತ್ ಶಹೀರಾ, ರಹ್ಮಾನಿಯಾ ಮದ್ರಸ ಸೆರ್ಕಳ ನಗರ, ಆಯಿಶತ್ ನಾಝ್, ಹಿದಾಯತುಲ್ ಇಸ್ಲಾಂ ಮದ್ರಸ ಬೆಳ್ಳಾರೆ.
7ನೇ ತರಗತಿ : ಫಾತಿಮತ್ ಶಝಾ, ಹಿದಾಯತು ಸ್ಸಿಬಿಯಾನ್ ಮದ್ರಸ ಪರಪ್ಪು, ಫಾತಿಮತ್ ಫಮೀಝ ಎಂ.ಪಿ, ಹಯಾತುಲ್ ಇಸ್ಲಾಂ ಮದ್ರಸ ಬೊಳ್ಮಾರ್, ಮುಹಮ್ಮದ್ ಇಸ್ಮಾಯಿಲ್ ಹಿಶಾಮ್, ನಮ-ಉಲ್-ಹುದಾ ಸುನ್ನಿ ಅರೆಬಿಕ್ ಸ್ಕೂಲ್ ಬೋಳಾರ, ತಮೀಮ್ ಟಿ.ಐ, ಹಯಾತುಲ್ ಇಸ್ಲಾಂ ಮದ್ರಸ ಪೈಂಬಚಾಲ್, ಆಯಿಶತ್ ಶಮ್ನಾ ಎಂ.ಪಿ, ಹಯಾತುಲ್ ಇಸ್ಲಾಂ ಮದ್ರಸ ಪೈಂಬಚಾಲ್, ಖದೀಜತ್ ಹಸೀಬ, ಹಯಾತುಲ್ ಇಸ್ಲಾಂ ಮದ್ರಸ ಮೈದಾನಿಮೂಲೆ, ಖತೀಜತ್ ತನ್ಸಿಯಾ, ಹಯಾತುಲ್ ಇಸ್ಲಾಂ ಮದ್ರಸ ಬೊಳ್ಮಾರ್, ಹನ್ನತ್ ಅಝ್ಮಿಯಾ, ಹಿದಾಯತು ಸ್ಸಿಬಿಯಾನ್ ಮದ್ರಸ ಪರಪ್ಪು, ರಾಬಿಯತ್ ತಸ್ಪಿಯಾ, ಹಯಾತುಲ್ ಇಸ್ಲಾಂ ಮದ್ರಸ ಬೊಳ್ಮಾರ್, ಅದೀಬಾ, ನೂರುಲ್ ಹುದಾ ಮದ್ರಸ ಕುಂಜತ್‍ಕಲ.
10ನೇ ತರಗತಿ: ರಝ್ಝಾನ ಎಂ.ಎ, ನೂರುಲ್ ಇಸ್ಲಾಂ ಮದ್ರಸ ಮಾಡನ್ನೂರು, ಫಾತಿಮತ್ ನುಸೈಬ ಎಂ.ಡಿ, ನೂರುಲ್ ಇಸ್ಲಾಂ ಮದ್ರಸ ಮಾಡನ್ನೂರು, ಕೆ.ಆರ್ ರಸೀನಾ, ಹಿದಾಯತುಲ್ ಇಸ್ಲಾಂ ಮದ್ರಸ ಪರಣೆ, ಆಯಿಶತ್ ಮಿಶ್ರಿಯಾ ಬಿ.ಎಂ, ಹಯಾತುಲ್ ಇಸ್ಲಾಂ ಮದ್ರಸ ಬೊಳ್ಮಾರ್, ಮುಹಮ್ಮದ್ ಮುಸ್‍ಹಬ್, ನೂರುಲ್ ಇಸ್ಲಾಂ ಮದ್ರಸ ಮಾಡನ್ನೂರು, ಆಯಿಶಾ ಶಹನಾಝ್, ಬದ್ರಿಯಾ ಹಯಾತುಲ್ ಇಸ್ಲಾಂ ಮದ್ರಸ ಬೋರುಗುಡ್ಡೆ, ಮುಹಮ್ಮದ್ ಸುಹೈಲ್, ನೂರುಲ್ ಇಸ್ಲಾಂ ಮದ್ರಸ ಮಾಡನ್ನೂರು.
12ನೇ ತರಗತಿ: ಅಸ್‍ಮೀನಾ, ನೂರುಲ್ ಉಲೂಂ ಮದ್ರಸ ಕೆ.ಸಿ ರೋಡ್ ಕಲ್ಲಡ್ಕ, ಝುವೈರಿಯಾ ಟಿ.ಎಂ, ಹಯಾತುಲ್ ಇಸ್ಲಾಂ ಮದ್ರಸ ಪೈಂಬಚಾಲ್, ಅಝ್‍ಮೀನಾ, ನೂರುಲ್ ಉಲೂಂ ಮದ್ರಸ ಕೆ.ಸಿ ರೋಡ್ ಕಲ್ಲಡ್ಕ.














