Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಹೆಚ್ಚುವರಿ ಘನ ತ್ಯಾಜ್ಯ ನಿರ್ವಹಣೆಗಾಗಿ...

ಹೆಚ್ಚುವರಿ ಘನ ತ್ಯಾಜ್ಯ ನಿರ್ವಹಣೆಗಾಗಿ ಉಪಕರ ವಿಧಿಸಲು ಬಿಬಿಎಂಪಿ ಸಿದ್ಧತೆ

ಹೊಸ ತ್ಯಾಜ್ಯ ನಿರ್ವಹಣೆ ಕರಡು-2019, ಆ.7ರಿಂದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ

ವಾರ್ತಾಭಾರತಿವಾರ್ತಾಭಾರತಿ5 Aug 2019 11:18 PM IST
share
ಹೆಚ್ಚುವರಿ ಘನ ತ್ಯಾಜ್ಯ ನಿರ್ವಹಣೆಗಾಗಿ ಉಪಕರ ವಿಧಿಸಲು ಬಿಬಿಎಂಪಿ ಸಿದ್ಧತೆ

ಬೆಂಗಳೂರು, ಆ.5: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೊಸ ತ್ಯಾಜ್ಯ ನಿರ್ವಹಣೆ ಕರಡು-2019ಅನ್ನು ಸಿದ್ಧಪಡಿಸಿದ್ದು, ಕರಡು ನೀತಿ ಜಾರಿಗೆ ಬಂದ ಮೇಲೆ ಪ್ರತಿ ವರ್ಷ ಆಸ್ತಿ ತೆರಿಗೆದಾರರು ಆಸ್ತಿ ತೆರಿಗೆಯ ಶೇ.5ರಷ್ಟನ್ನು ಹೆಚ್ಚುವರಿಯಾಗಿ ಘನ ತ್ಯಾಜ್ಯ ನಿರ್ವಹಣಾ ಉಪಕರ ಎಂದು ಪಾವತಿಸಬೇಕು.

ಬಿಬಿಎಂಪಿಯು ಆಸ್ತಿ ತೆರಿಗೆ ಜತೆಯೇ ಇದನ್ನು ವಸೂಲಿ ಮಾಡಲಿದೆ. ಇದರೊಂದಿಗೆ ಪಾಲಿಕೆ ಕೌನ್ಸಿಲ್ ಅನುಮೋದನೆ ಇಲ್ಲದೆಯೂ ಪ್ರತೀ ವರ್ಷ ಶೇ.5 ರಷ್ಟು ಉಪಕರ ಹೆಚ್ಚಿಸಬಹುದಾಗಿದೆ. ಕೌನ್ಸಿಲ್ ಅನುಮತಿಯೊಂದಿಗೆ ಹೆಚ್ಚುವರಿ ಉಪಕರ ವಸೂಲಿ ಮಾಡುವ ಅವಕಾಶವನ್ನು ನೀಡಲಾಗಿದೆ.

ಬಿಬಿಎಂಪಿ ತ್ಯಾಜ್ಯ ನಿರ್ವಹಣೆಗೂ ಉಪಕರ ವಿಧಿಸಲು ಮುಂದಾಗಿದ್ದು, ಈ ಮೂಲಕ ಬೀದಿ ವ್ಯಾಪಾರಿಗಳೂ ಕೂಡ ತಿಂಗಳಿಗೆ ಗರಿಷ್ಠ 50ರೂ. ಪಾವತಿ ಮಾಡಬೇಕಾಗುತ್ತದೆ. ನಗರದ ಎಲ್ಲಾ ರೀತಿಯ ಖಾಲಿ ನಿವೇಶನಗಳಿಗೂ ಪ್ರತಿ ಚದರಡಿಗೆ ತಿಂಗಳಿಗೆ 20 ಪೈಸೆಯಂತೆ ತ್ಯಾಜ್ಯ ನಿರ್ವಹಣಾ ಉಪಕರ ನಿಗದಿಪಡಿಸಲಾಗಿದೆ. ಸಣ್ಣ ಪ್ರಮಾಣದ ವಾಣಿಜ್ಯ ಉದ್ಯಮಗಳ ಪೈಕಿ, 50 ಆಸನ ಹೊಂದಿರುವ ಹೊಟೇಲ್‌ಗಳಿಗೆ ಮಾಸಿಕ 500 ರೂ., ಅದಕ್ಕಿಂತ ಹೆಚ್ಚು ಆಸನ ಇದ್ದರೆ 750 ರೂ., ಮೆಸ್ ಮತ್ತು ಮೊಬೈಲ್ ಕ್ಯಾಂಟೀನ್‌ಗಳಿಗೆ 250 ರೂ. ವಿಧಿಸಲು ತೀರ್ಮಾನಿಸಲಾಗಿದೆ.

ಇನ್ನು, ಕಾಫಿ, ಟೀ, ಬೇಕರಿಗಳಿಗೆ 100 ರೂ, ಫಾಸ್ಟ್‌ಫುಡ್ ಮಳಿಗೆಗಳಿಗೆ 200 ರೂ., ಮದುವೆ, ಸಭೆ, ಸಮಾರಂಭ ಸಮುದಾಯ ಭವನಗಳಿಗೆ ಮಾಸಿಕ 1,000 ರೂ., ಹಾಸ್ಟೆಲ್, ಲಾಡ್ಜ್ ಮತ್ತು ಬಾರ್, ರೆಸ್ಟೋರೆಂಟ್‌ಗಳಿಗೆ 750 ರೂ., ಮಾಂಸ ವ್ಯಾಪಾರಿ ಮಳಿಗೆಗಳಿಗೆ 500 ರೂ., ಟೆಕ್ಸ್‌ಟೈಲ್ಸ್, ಗಾಮೆಂಟ್ಸ್ 150 ರೂ., 50 ಹಾಸಿಗೆ ವರೆಗಿನ ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ 400 ರೂ., ಅದಕ್ಕಿಂತ ಹೆಚ್ಚಿದ್ದರೆ 800 ರೂ., ಕ್ಲಿನಿಕ್‌ಗಳಿಗೆ 250 ರೂ., ಚಿತ್ರಮಂದಿರಗಳಿಗೆ 500 ರೂ., ಎಲ್ಲಾ ರೀತಿಯ ವಾಹನಗಳ ಶೋರೂಂಗಳಿಗೆ 1,000ರೂ., ವಾಹನ ಸರ್ವಿಸ್ ಕೇಂದ್ರಗಳಿಗೆ 500 ರೂ. ಇದರೊಂದಿಗೆ ಪ್ರತಿ ವ್ಯಾಪಾರಕ್ಕೂ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಹೋಟೆಲ್, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಅಥವಾ ಖಾಸಗಿ ಕಟ್ಟಡ, ಖಾಲಿ ನಿವೇಶನಗಳಲ್ಲಿ ಕನಿಷ್ಠ ಒಂದು ವಾರ ಅಥವಾ ಅದಕ್ಕೂ ಮೇಲ್ಪಟ್ಟು ನಡೆಯುವ ವಸ್ತು ಪ್ರದರ್ಶನ, ಮದುವೆ ಸಮಾರಂಭಗಳಿಂದ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿ ಅವಧಿವಾರು ಪ್ರತ್ಯೇಕ ಕರ ನಿಗದಿಪಡಿಸಲಾಗಿದೆ.

ಇದರ ಅನ್ವಯ ವಾರದವರೆಗೆ 1500 ರೂ., ವಾರದಿಂದ ತಿಂಗಳವರೆಗೆ 3 ಸಾವಿರ ರೂ.,ತಿಂಗಳು ಮೇಲ್ಪಟ್ಟ ಕಾರ್ಯಕ್ರಮಗಳಿಗೆ 6 ಸಾವಿರ ರೂ. ಕರ ನಿಗದಿಪಡಿಸಲಾಗಿದೆ. ಖಾಸಗಿ ಕಾರ್ಯಕ್ರಮಗಳಿಗೆ ಸೇರುವ ಜನಸಂಖ್ಯೆ ಆಧಾರದ ಮೇಲೆ ಕಾರ್ಯಕ್ರಮ ಆಯೋಜಕರು ಕನಿಷ್ಠ 10 ಸಾವಿರದಿಂದ 1 ಲಕ್ಷ ರೂ.ವರೆಗೆ ಪಾಲಿಕೆ ಮುಂಗಡಹಣ ಪಡೆಯಲಿದೆ. ಸಮಾರಂಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಬಿಬಿಎಂಪಿಗೆ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ ನೂರು ರೂ.ಗಳಂತೆ ಪಾವತಿಸಬೇಕಾಗುತ್ತದೆ.

ಪಾಲಿಕೆ ಕೌನ್ಸಿಲ್ ಸಭೆ ಅನುಮೋದನೆ:

ಹೊಸ ಕಾನೂನು ಪ್ರಕಾರ ಹಸಿ, ಒಣ ತ್ಯಾಜ್ಯ, ಪ್ಲಾಸ್ಟಿಕ್, ಕಟ್ಟಡ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ವಾಹನಗಳಿಗೆ ನೀಡುವುದು ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವೆಸೆದು ನಿಯಮ ಉಲ್ಲಂಘಿಸಿದರೆ 1,000 ರೂ. ನಿಂದ 25 ಸಾವಿರ ರೂ. ವರೆಗೆ ದುಬಾರಿ ದಂಡ ಕಟ್ಟಬೇಕಾಗುತ್ತದೆ. ಪಾಲಿಕೆ ಕೌನ್ಸಿಲ್ ಸಭೆ ಅನುಮೋದನೆ ದೊರೆತಿದೆ. ಈ ಕರಡಿನ ಕುರಿತು ಅಧಿಸೂಚನೆ ಪ್ರಕಟನೆ ಬಳಿಕ, ಸಾರ್ವಜನಿಕರಿಂದ ಸಲಹೆ ಅಥವಾ ಆಕ್ಷೇಪಣೆಗಳನ್ನು ಸ್ವೀಕರಿಸಲು 15 ದಿನಗಳ ಕಾಲಾವಕಾಶವನ್ನು ಬಿಬಿಎಂಪಿ ನೀಡಲಿದೆ.

ಆ.7ರಿಂದ ಸಾರ್ವಜನಿಕ ಅಭಿಪ್ರಾಯ: ರಾಜಧಾನಿಯಲ್ಲಿ ಪ್ರತಿದಿನ 4 ಸಾವಿರ ಟನ್‌ಗೂ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರ ನಿರ್ವಹಣೆಗಾಗಿ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಮಿಶ್ರತ್ಯಾಜ್ಯ ವಿಲೇವಾರಿಗಾಗಿ ಕ್ವಾರಿ ನಿಗದಿ ಮಾಡಲಾಗಿದೆ. ಹಾಗೆಯೇ, ಕಸದ ಸಮಸ್ಯೆ ನಿರ್ವಹಣೆಗಾಗಿ ವಾರ್ಷಿಕ 1 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇಷ್ಟಾದರೂ ಕಸದ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಹೀಗಾಗಿ ಬಿಬಿಎಂಪಿಗೆ ಪ್ರತ್ಯೇಕ ಘನ ತ್ಯಾಜ್ಯ ನಿರ್ವಹಣಾ ಕರಡು ನೀತಿ ಸಿದ್ಧಪಡಿಸಿದ್ದು, ಆ.7ರಂದು ಸಾರ್ವಜನಿಕ ಅಭಿಪ್ರಾಯ ಮತ್ತು ಆಕ್ಷೇಪಣೆಗಾಗಿ ಪ್ರಕಟಿಸಲಾಗುತ್ತದೆ.

ಕಸ ಸುಟ್ಟರೆ 25 ಸಾವಿರ ದಂಡ

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮೂತ್ರ ವಿರ್ಸಜನೆ ಮಾಡಿದರೆ ಮೊದಲ ಬಾರಿಗೆ 500 ರೂ., ದಂಡವನ್ನು ವಿಧಿಸಲಾಗುತ್ತದೆ ಎರಡನೇ ಬಾರಿಯೂ ಪುನರಾವರ್ತಿಸಿದರೆ 1,000 ರೂ. ದಂಡ ವಿಧಿಸಲಾಗುತ್ತದೆ. ಪ್ರಾಣಿಗಳ ತ್ಯಾಜ್ಯ ವಿಂಗಡಣೆ ವೈಫಲ್ಯ ಮೊದಲ ಬಾರಿಗೆ 1000 ರೂ, ಎರಡನೇ ಬಾರಿಗೆ 2,000 ರೂ., ಕಸ ಸುಟ್ಟರೆ 5000 ರೂ., ಕಸ(ವಾಣಿಜ್ಯ ಉತ್ಪಾದಕರಿಗೆ) ಸುಟ್ಟರೆ 25,000 ರೂ., ಕಟ್ಟಡ ತ್ಯಾಜ್ಯ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ 5,000, ತ್ಯಾಜ್ಯ ಉತ್ಪಾದನೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ 10,000 ರೂ., ದಂಡವನ್ನು ವಿಧಿಸಲಾಗುತ್ತದೆ.

ರಾಜಧಾನಿಯಲ್ಲಿ ಹಸಿತ್ಯಾಜ್ಯ ಮತ್ತು ಒಣ ತ್ಯಾಜ್ಯ ವಿಂಗಡಣೆಯಲ್ಲಿ ಕುಸಿತ, ಸಂಗ್ರಹಣೆಯಲ್ಲಿ ವೈಫಲ್ಯಗಳ ದೂರು, ಆರೋಪಗಳ ಹಿನ್ನೆಲೆಯಲ್ಲಿ ಕರಡು ರೂಪಿಸಿದ್ದು, ಇದು ಅನುಷ್ಠಾನಕ್ಕೆ ಬಂದರೆ ನಗರದ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಗಲಿದೆ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X