370ನೇ ವಿಧಿ ರದ್ದತಿಯನ್ನು ಬೆಂಬಲಿಸಿದ ಕಾಂಗ್ರೆಸ್ ನಾಯಕ ಜನಾರ್ದನ ದ್ವಿವೇದಿ

ಹೊಸದಿಲ್ಲಿ, ಆ. 5: ಸರಕಾರವು ಐತಿಹಾಸಿಕ ತಪ್ಪೊಂದನ್ನು ಸರಿಪಡಿಸಿದೆ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ದ್ವಿವೇದಿ ಅವರು ವಿಧಿ 370ರ ರದ್ದತಿ ಕುರಿತು ತನ್ನ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ ಲಭಿಸಿದ ಸಂದರ್ಭದಲ್ಲಿ ನಡೆದಿದ್ದ ಈ ತಪ್ಪನ್ನು ತಿದ್ದಿಕೊಂಡಿರುವುದು ರಾಷ್ಟ್ರಕ್ಕೆ ತೃಪ್ತಿಯನ್ನುಂಟು ಮಾಡಿದೆ ಎಂದಿದ್ದಾರೆ.
ಅದೊಂದು ತುಂಬ ಹಳೆಯ ವಿಷಯ. ಸ್ವಾತಂತ್ರಾ ನಂತರ ಹಲವಾರು ಸ್ವಾತಂತ್ರ ಹೋರಾಟಗಾರರು ವಿಧಿ 370 ಮುಂದುವರಿಯುವುದನ್ನು ಬಯಸಿರಲಿಲ್ಲ. ತಾನು ಈ ವಿಧಿಗೆ ವಿರುದ್ಧವಾಗಿದ್ದ ಡಾ. ರಾಮ ಮನೋಹರ ಲೋಹಿಯಾ ಬಳಿ ರಾಜಕೀಯ ತರಬೇತಿ ಪಡೆದಿದ್ದೆ. ಈ ಐತಿಹಾಸಿಕ ತಪ್ಪನ್ನು ವಿಳಂಬವಾಗಿಯಾದರೂ ಸರಿಪಡಿಸಿರುವುದು ಸ್ವಾಗತಾರ್ಹವಾಗಿದೆ ಎಂದ ದ್ವಿವೇದಿ, ತನ್ನ ಅಭಿಪ್ರಾಯವು ವೈಯಕ್ತಿಕವಾಗಿದೆಯೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು.
Next Story





