ಪ್ರೊ ಕಬಡ್ಡಿ ಲೀಗ್: ದಿಲ್ಲಿಗೆ ಜಯ
ಪಾಟ್ನಾ, ಆ.5: ರೈಡರ್ ನವೀನ್ ಕುಮಾರ್ ಉತ್ತಮ ಪ್ರದರ್ಶನದ ನೆರವಿನಿಂದ ದಬಾಂಗ್ ದಿಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ನಡೆದ 27ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 35-24 ಅಂಕಗಳ ಅಂತರದಿಂದ ಮಣಿಸಿತು.
ಏಳನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಸೋಲು ಕಂಡಿರುವ ಜೈಪುರ ಪರ ದೀಪಕ್ ಹೂಡಾ(11) ಸರ್ವಾಧಿಕ ಅಂಕ ಗಳಿಸಿದರು. ವಿಜೇತ ದಿಲ್ಲಿ ಪರ ಚಂದ್ರನ್ ರಂಜಿತ್ 10 ಅಂಕ ಗಳಿಸಿ ಸಹ ಆಟಗಾರ ನವೀನ್‌ಗೆ ಸಾಥ್ ನೀಡಿದರು.
Next Story





