Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಹಣಕಾಸು ಸಾಕ್ಷರತೆಯ ಕೈಪಿಡಿ

ಹಣಕಾಸು ಸಾಕ್ಷರತೆಯ ಕೈಪಿಡಿ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ6 Aug 2019 12:08 AM IST
share
ಹಣಕಾಸು ಸಾಕ್ಷರತೆಯ ಕೈಪಿಡಿ

ಸದ್ಯದ ದಿನಗಳಲ್ಲಿ ಆರ್ಥಿಕತೆ ಬಹು ಚರ್ಚೆಯ ವಿಷಯವಾಗಿದೆ. ಒಂದೆಡೆ ಆರ್ಥಿಕ ಹಿಂಜರಿತ, ಮಗದೊಂದೆಡೆ ನಿರುದ್ಯೋಗ, ಬ್ಯಾಂಕ್‌ಗಳ ಸುಧಾರಣೆ, ಹೊಸ ಹೊಸ ನಿಯಮಗಳು, ತೆರಿಗೆಗಳ ಕಬಂಧ ಬಾಹು ಇವೆಲ್ಲವುಗಳ ನಡುವೆ ಶ್ರೀಸಾಮಾನ್ಯ ತನ್ನ ಆರ್ಥಿಕ ಸ್ಥಿರತೆಯನ್ನುಕಾಪಾಡಬೇಕಾಗಿದೆ. ಆರ್ಥಿಕ ವಲಯದಲ್ಲಿ ವ್ಯಾಪಕ ಅನುಮಾನಗಳು ವಿಸ್ತರಿಸುತ್ತಿದೆ. ಶ್ರೀಸಾಮಾನ್ಯನಿಗೂ ಸಾವಿರ ಸಂಶಯಗಳು. ಈ ಹಿಂದೆ ಬ್ಯಾಂಕ್‌ಗಳ ಕುರಿತಂತೆ ಒಂದು ಭರವಸೆಯಿತ್ತು. ಆದರೆ ಹೊಸ ಹೊಸ ನೀತಿಗಳು ಬ್ಯಾಂಕ್‌ಗಳ ಭರವಸೆಯನ್ನು ಇಲ್ಲವಾಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀಸಾಮಾನ್ಯ ಹಣ ಉಳಿತಾಯದ ಕುರಿತಂತೆ ಹೇಗೆ ಯೋಚಿಸಬೇಕು, ಯಾರಲ್ಲಿ ಸಲಹೆ ಕೇಳಬೇಕು ಎನ್ನುವ ಗೊಂದಲದಲ್ಲಿದ್ದಾನೆ. ಆ ಗೊಂದಲವನ್ನು ಪರಿಹರಿಸುವ ಸಣ್ಣದೊಂದು ಪ್ರಯತ್ನವನ್ನು ಆರ್ಥಿಕ ತಜ್ಞ ಯು. ಪಿ. ಪುರಾಣಿಕ್ ಅವರು ‘ಬದುಕು ಬೆಳಗಿಸುವ ಉಳಿತಾಯದ ಉಪಾಯಗಳು’ ಕೃತಿಯ ಮೂಲಕ ಮಾಡಿದ್ದಾರೆ.
   ಕನ್ನಡದ ಪ್ರಮುಖ ಆರ್ಥಿಕ ವಿಷಯಗಳ ಬರಹಗಾರರಾಗಿರುವ ಯು.ಪಿ. ಪುರಾಣಿಕರು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ವಿಭಾಗೀಯ ಪ್ರಬಂಧಕರು ಹಾಗೂ ದಿ. ಬೆಂಗಳೂರು ಸಿಟಿ. ಕೋ ಆಪರೇಟಿವ್ ಬ್ಯಾಂಕ್‌ನ ವೃತ್ತಿಪರ ನಿರ್ದೇಶಕರು. ಬ್ಯಾಂಕಿಂಗ್ ಸಾಕ್ಷರತೆ ಹಾಗೂ ವಿತ್ತೀಯ ಸೇರ್ಪಡೆ ವಿಚಾರಗಳಲ್ಲಿ ಸುಮಾರು ಒಂದು ಸಾವಿರ ಅಂಕಣ-ಲೇಖನಗಳನ್ನು ಕನ್ನಡದಲ್ಲಿ ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದೇ ವೇಳೆ ಬ್ಯಾಂಕಿಂಗ್ ಹಾಗೂ ಹಣಕಾಸು ತಜ್ಞರಾಗಿ ಚಂದನ ಟಿ. ವಿ. ಹಾಗೂ ಆಕಾಶವಾಣಿಯಲ್ಲಿ ಫೋನ್ ಇನ್ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ನಡೆದ ಪ್ರಶ್ನೆ ಮತ್ತು ಉತ್ತರಗಳನ್ನೇ ಅವರು ಇಲ್ಲಿ ಪುಸ್ತಕವಾಗಿ ಪ್ರಕಟಿಸಿದ್ದಾರೆ. ಇಲ್ಲಿ ಉಳಿತಾಯಗಳ ಕುರಿತಂತೆ ಲೇಖನಗಳೋ, ವಿಶ್ಲೇಷಣೆಗಳೋ ಇಲ್ಲ. ಬದಲಿಗೆ ಶ್ರೀಸಾಮಾನ್ಯ ಎದುರಿಸುವ ಸಮಸ್ಯೆಗಳು ಆತನದೇ ಮಾತಿನಲ್ಲಿ ನೀಡಲಾಗಿದೆಯಾದರೆ, ಅದಕ್ಕೆ ಬೇಕಾದ ಪರಿಹಾರವನ್ನು ಉತ್ತರ ರೂಪದಲ್ಲಿ ಲೇಖಕರು ನೀಡುತ್ತಾರೆ. ಶ್ರೀಸಾಮಾನ್ಯನ ಸಮಸ್ಯೆಗಳು ಇಲ್ಲಿ ನೇರವಾಗಿ ಚರ್ಚಿಸಲ್ಪಡುತ್ತದೆ.
ಹಣದ ಸದ್ಬಳಕೆ ಬಗ್ಗೆ ಅವರು ಬರೀ ಸಲಹೆ ಗಳನ್ನಷ್ಟೇ ನೀಡುವುದಿಲ್ಲ. ಪ್ರಶ್ನೆ ಕೇಳಿದವರ ಒಳಿತನ್ನು ಬಯಸಿ ದೂರದೃಷ್ಟಿಯಿರುವ ಮಾಹಿತಿಗಳನ್ನು ನೀಡು ತ್ತಾರೆ. ಪುರಾಣಿಕ್ ಹಳೆ ತಲೆಮಾರಿನವರು. ಸಾಂಪ್ರದಾಯಿಕ ಹೂಡಿಕೆಗೆ ಅವರು ಹೆಚ್ಚು ಒತ್ತು ನೀಡುತ್ತಾರೆ. ನವ ಆಧುನೀಕರಣ, ಹೊಸ ಸುಧಾರಣೆಗಳನ್ನು ಎದುರಿಸುವ ಕುರಿತಂತೆ ಅವರ ಉತ್ತರಗಳಲ್ಲಿ ಹೆಚ್ಚಿನ ಪರಿಹಾರಗಳು ನಮಗೆ ಕಾಣ ಸಿಗುವುದಿಲ್ಲ. ಆದರೆ ಅವರು ನೀಡುವ ಉತ್ತರಗಳಲ್ಲಿರುವ ಪ್ರಾಮಾಣಿಕತೆಯೇ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಹಿರಿಯ ಪತ್ರಕರ್ತರಾದ ಕೇಶವ ಜಿ. ಝಿಂಗಾಡೆ ಹೇಳುವಂತೆ ಇದೊಂದು, ಹಣಕಾಸು ಸಾಕ್ಷರತೆಯ ಕೈಪಿಡಿಯಾಗಿದೆ.
ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 108. ಮುಖಬೆಲೆ 90 ರೂಪಾಯಿ. ಆಸಕ್ತರು 97315 54955 ದೂರವಾಣಿಯನ್ನು ಸಂಪರ್ಕಿಸಬಹುದು. 

share
-ಕಾರುಣ್ಯಾ
-ಕಾರುಣ್ಯಾ
Next Story
X