ಭಾರೀ ಮಳೆ: ಎಚ್ಚರ ವಹಿಸಲು ಉಡುಪಿ ಡಿಸಿ ಸೂಚನೆ
ಉಡುಪಿ, ಆ.6: ಉಡುಪಿ ಜಿಲ್ಲೆಯಾದ್ಯಂತ ಮುಂದಿನ ಎರಡು ದಿನಗಳ ಕಾಲ ವಿಪರೀತ ಮಳೆ ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಭಾರೀ ಗಾಳಿ ಬೀಸುವ ಸಂಭವವಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಸಮುದ್ರ ಹಾಗೂ ನದಿಗಳಲ್ಲಿ ಮೀನುಗಾರಿಕೆಗೆ ಬೋಟು ಮತ್ತು ದೋಣಿ ಗಳಲ್ಲಿ ತೆರಳದಂತೆ ಹಾಗೂ ಸಾರ್ವಜನಿಕರು ಮತ್ತು ಪ್ರವಾಸಿಗರು ಹೋಗದಂತೆ ಎಚ್ಚರ ವಹಿಸುವುದು ಹಾಗೂ ಜಿಲ್ಲೆಯಲ್ಲಿ ಮುಂಜಾಗೃತ ಕ್ರಮವಾಗಿ ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ತಮ್ಮ ಮೊಬೈಲ್/ ಕಚೇರಿ ದೂರವಾಣಿ/ ವಾಹನ ಅಗತ್ಯ ಪರಿಕ್ರಮಗಳನ್ನು ಸದಾ ಸನ್ನದ್ಧರಾಗಿರಿಸಿಕೊಂಡು ತಕ್ಷಣವೇ ಸ್ಪಂದಿಸುವಂತೆ ಅವರು ಆದೇಶ ಹೊರಡಿಸಿದ್ದಾರೆ.
Next Story





