ಮಗಳ ವೇಷದಲ್ಲಿ ಪರಾರಿಯಾಗಲು ಯತ್ನಿಸಿದ್ದ ಕೈದಿ ಸಾವು
ರಿಯೋ ಡಿ ಜನೈರೊ (ಬ್ರೆಝಿಲ್), ಆ. 6: ತನ್ನ ಮಗಳ ವೇಷ ಧರಿಸಿ ಬ್ರೆಝಿಲ್‌ನ ಜೈಲೊಂದರಿಂದ ಪರಾರಿಯಾಗಲು ಪ್ರಯತ್ನಿಸಿ ಸಿಕ್ಕಿಬಿದ್ದ ಭೂಗತ ಪಾತಕಿ ತನ್ನ ಜೈಲು ಕೋಣೆಯಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾನೆ ಎಂದು ರಿಯೋ ಡಿ ಜನೈರೊ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
42 ವರ್ಷದ ಮಾದಕ ವಸ್ತು ಜಾಲದ ರೂವಾರಿ ಕ್ಲಾವಿನೊ ಡ ಸಿಲ್ವ ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅವನು ಶನಿವಾರ ತನ್ನನ್ನು ನೋಡಲು ಬಂದ ಮಗಳನ್ನು ಕುಳ್ಳಿರಿಸಿ ಅವಳ ವೇಷದಲ್ಲಿ ಜೈಲಿನಿಂದ ಹೊರಗೆ ಹೋಗುತ್ತಿದ್ದಾಗ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ದೃಶ್ಯದ ತುಣುಕುಗಳು ಜಗತ್ತಿನಾದ್ಯಂತ ವೈರಲ್ ಆಗಿದ್ದವು.
‘‘ಕೈದಿಯು ಬೆಡ್‌ಶೀಟ್‌ನಿಂದ ನೇಣು ಬಿಗಿದುಕೊಂಡಂತೆ ಕಂಡುಬಂದಿದೆ’’ ಎಂದು ಜೈಲು ಅಧಿಕಾರಿಗಳು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story