ಕೃಷಿಯಿಂದ ವಿಮುಖರಾಗಿರುವುದೇ ಜಲಕ್ಷಾಮಕ್ಕೆ ಕಾರಣ: ಕೇಮಾರು ಶ್ರೀ

ಉಡುಪಿ, ಆ.6: ಜನರಿಗೆ ರಕ್ತ ಮತ್ತು ನೀರಿನ ಮಹತ್ವದ ಬಗ್ಗೆ ಅರಿವು ಇಲ್ಲ. ಇವುಗಳನ್ನು ಉಳಿಸುವ ಕೆಲಸ ಮಾಡಬೇಕು. ಇಂದಿನ ಜಲಕ್ಷಾಮಕ್ಕೆ ಕೃಷಿಯಿಂದ ವಿಮುಖವಾಗಿರುವುದೇ ಕಾರಣ ಎಂದು ಕೇಮಾರು ಮಠಾಧೀಶ ಶ್ರೀಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಆಶ್ರಯದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಿರ್ಮಿತಿ ಕೇಂದ್ರದ ಸಹಯೋಗದೊಂದಿಗೆ ಸ್ಥಳೀಯಾ ಡಳಿತ ಸಂಸ್ಥೆಯ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ‘ನೀರು ಆರುವ ಮುನ್ನ’ ನೆಲ ಅರಣ್ಯ ಜಲ ಸಮೃದ್ಧಿ ಸಿದ್ಧಿ ಸಂಕಲ್ಪ ಕುರಿತ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತ ನಾಡುತಿದ್ದರು.
ಅನ್ನ ನೀಡುತ್ತಿದ್ದ ಗದ್ದೆಗಳಲ್ಲಿ ಇಂದು ಪ್ಲಾಟ್‌ಗಳು ತಲೆ ಎತ್ತಿವೆ. ಇದರ ಪರಿಣಾಮ ನೀರು ಇಂಗುವ ಬದಲು ಹರಿದು ಸಮುದ್ರ ಸೇರುತ್ತಿವೆ. ಮೊದಲು ಇಂಗು ಗುಂಡಿಯ ಕೆಲಸವನ್ನು ಗದ್ದೆಗಳು ಮಾಡುತ್ತಿದ್ದವು. ಮತ್ತೆ ಕೃಷಿಯತ್ತ ನಾವು ಮುಖ ಮಾಡುವ ಮೂಲಕ ಜಲಕ್ಷಾಮವನ್ನು ದೂರ ಮಾಡಬೇಕು ಎಂದು ಅವರು ತಿಳಿಸಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಈ ವರ್ಷ ವಿಶೇಷವಾಗಿ ಜಲಾಮೃತ ಯೋಜನೆ ಯಲ್ಲಿ ಜಲ ಸಾಕ್ಷರತೆ ಮೂಡಿಸಲಾಗುತ್ತಿದೆ. ನೀರನ್ನು ಸಂರಕ್ಷಿಸುವುದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸರಕಾರದ ಸೂಚನೆ ಬಂದಿದೆ. ಮಳೆಗಾಲದಲ್ಲಿ ಜಲ ಸಂರಕ್ಷಿಸಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯನು್ನ ದೂರ ಮಾಡಬಹುದಾಗಿದೆ ಎಂದರು.
ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್ ಮಾತ ನಾಡಿ, ಗ್ರಾಪಂಗಳಿಗೆ ಜಲಮೂಲ ಹುಡುಕುವುದು ಮಾತ್ರವಲ್ಲ ಅದರ ವಿತರಣೆ ಮತ್ತು ಸರಿಯಾಗಿ ಬಳಕೆ ಮಾಡದಿದ್ದರೆ ದಂಡ ವಿಧಿಸುವ ಅವಕಾಶ ಕೂಡ ಕಾಯಿದೆಯಲ್ಲಿದೆ. ಅದರ ಜವಾಬ್ದಾರಿ ಆಯಾ ಗ್ರಾಪಂಗಳ ಪಿಡಿಓಗೆ ಇರುತ್ತದೆ ಎಂದು ಹೇಳಿದರು.
ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಮೊದಲು ಗ್ರಾಪಂನವರು ತಮ್ಮ ಕಚೇರಿಗಳಿಗೆಯೇ ಆಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಇದು ಆ ಗ್ರಾಮದ ಜನರಿಗೆ ಪ್ರೇರಣೆಯಾಗುತ್ತದೆ. ಅದೇ ರೀತಿ ಗ್ರಾಪಂನಲ್ಲಿರುವ ಜಲ ಮೂಲಗಳನ್ನು ರಿಚಾರ್ಚ್ ಮಾಡುವಂತೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ರುವ ತೆರೆದ ಬಾವಿ, ಕೊಳವೆ ಬಾವಿಗಳ ರಿಚಾರ್ಚ್ ಬಗ್ಗೆ ಮಾಹಿತಿ ಸಂಗ್ರಹಿಸ ಲಾಗುತ್ತದೆ. ಇದರಲ್ಲಿ ವಿಫಲವಾಗಿ ಕೊಳವೆಬಾವಿಯನ್ನು ಮತ್ತೆ ರಿಚಾರ್ಚ್ ಮಾಡುವುದರಿಂದ ಹೊಸದಾಗಿ ಕೊಳವೆ ಬಾವಿ ಕೊರೆುುವ ಅಗತ್ಯ ಬರುವುದಿಲ್ಲ ಎಂದರು.
ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಯೂನಿಯನ್ ರಾಜ್ಯಾಧ್ಯಕ್ಷ ನಾರಾಯಣ, ಕಾರ್ಯದರ್ಶಿ ರಾಘವೇಂದ್ರ, ಜಿಲ್ಲಾಧ್ಯಕ್ಷ ಶಿಧರ ಹೆಮ್ಮಣ್ಣ ಉಪಸ್ಥಿತರಿದ್ದರು.
ಪ್ರೊ.ಬಾಲಕೃಷ್ಣ ಮುದ್ದೋಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜರ್ನಾದನ ಕೊಡವೂರು ಸ್ವಾಗತಿಸಿದರು. ಅಸ್ಟ್ರೋ ಮೋಹನ್ ಪ್ರಾಸ್ತಾವಿಕ ವಾಗಿ ಮಾತನಾಡಿ ದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ಪ್ರತಿಯೊಂದು ಮನೆಗಳಲ್ಲೂ ಮಳೆ ನೀರು ಕೊಯ್ಲು ಅಳವಡಿಸುವ ಕುರಿತು ಪರಿಶೀಲನೆ ನಡೆಸಿ, ಬೇಸಿಗೆಯಲ್ಲಿ ತಲೆದೋರುವ ನೀರಿನ ಸಮಸ್ಯೆ ಯನ್ನು ಬಗೆಹರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹೊಸದಾಗಿ ನಿರ್ಮಿ ಸುವ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಸಿರುವುದನ್ನು ಪರಿಶೀಲಿಸಿ ನಂತರ ಸಮಾಪನ ಪ್ರಮಾಣಪತ್ರ ನೀಡುವ ಕುರಿತಂತೆ ಜಿಲ್ಲೆಯ ಎಲ್ಲಾ ಪಿಡಿಓಗಳಿಗೆ ಜಿಪಂ ಮೂಲಕ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.