ಬೆಳ್ತಂಗಡಿ: ಭೂ ಕುಸಿತದಲ್ಲಿ ಸಿಲುಕಿದ ಚಾರ್ಮಾಡಿ ಹಸನಬ್ಬರ ಕಾರು

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ವೇಳೆ ಮತ್ತೆ ಭೂಕುಸಿತವಾಗಿದ್ದು, ಮಣ್ಣು ತೆರವಿಗೆ ತೆರಳಿದ್ದ ಚಾರ್ಮಾಡಿ ಹಸನಬ್ಬರ ಕಾರು ಸಿಲುಕಿಕೊಂಡ ಘಟನೆ ವರದಿಯಾಗಿದೆ.
ಹಸನಬ್ಬರ ಕಾರಿನ ಮೇಲೆಯೇ ಮರ ಹಾಗೂ ಗುಡ್ಡ ಕುಸಿದಿದೆ. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದ್ದು, ಕಾರಿನಲ್ಲಿದ್ದ ಹಸನಬ್ಬ ಹಾಗೂ ಇತರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಘಟನೆಯಲ್ಲಿ ಕಾರು ಭಾಗಶಃ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.
Next Story





