ಎಚ್.ಎಸ್.ರೇವಣ್ಣ ಕಾರಾಗೃಹ ಇಲಾಖೆಯ ಸಲಹೆಗಾರ
ಬೆಂಗಳೂರು, ಆ.6: ನಿವೃತ್ತ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಎಚ್.ಎಸ್.ರೇವಣ್ಣ ಅವರನ್ನು ಕಾರಾಗೃಹ ಇಲಾಖೆಯ ಸಲಹೆಗಾರರನ್ನಾಗಿ ರಾಜ್ಯ ಸರಕಾರ ನೇಮಿಸಿದೆ.
ಕಾರಾಗೃಹಗಳ ಪೊಲೀಸ್ ಮಹಾನಿರೀಕ್ಷಕರಾಗಿದ್ದ ರೇವಣ್ಣ ಅವರು ಕಳೆದ ಜು.31 ರಂದು ನಿವೃತ್ತಿಯಾದ ಕೂಡಲೇ ಅವರನ್ನು ಕಾರಾಗೃಹ ಇಲಾಖೆಯ ಸಲಹಾಗಾರರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಿಸಿ ರಾಜ್ಯ ಸರಕಾರ ಆದೇಶಿಸಿದೆ.
ಕಾರಾಗೃಹ ಇಲಾಖೆಯಲ್ಲಿ ಆಡಳಿತ ವ್ಯವಸ್ಥೆಯ ನಿರ್ವಹಣೆಯ ಜೊತೆಗೆ ಕೈಗಾರಿಕೆ, ಕಷಿ, ಹೈನುಗಾರಿಕೆ, ಇತರ ಕ್ಷೇತ್ರಗಳನ್ನು ಉನ್ನತೀಕರಿಸಿ ಇಲಾಖೆ ಮತ್ತು ಬಂಧಿಗಳನ್ನು ಆರ್ಥಿಕ ಸಬಲೀಕರಣಗೊಳಿಸುವ ದೃಷ್ಟಿಯಿಂದ ಕೈಗೊಂಡಿರುವ ಸುಧಾರಣಾ ಕ್ರಮಗಳನ್ನು ರೂಪಿಸುವುದು. ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳಿಗೆ ರೇವಣ್ಣ ಅವರು ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
Next Story





