ಸುಲ್ತಾನ್ ಗೋಲ್ಡ್ ಮಾಲಕ ಕುಂಞಿ ಅಹ್ಮದ್ ಹಾಜಿ ನಿಧನ

ಮಂಗಳೂರು, ಆ. 6: ಪ್ರತಿಷ್ಠಿತ ಸುಲ್ತಾನ್ ಗೋಲ್ಡ್ ಚಿನ್ನಾಭರಣ ಮಳಿಗೆ ಮಾಲಕ ಕುಂಞಿ ಅಹ್ಮದ್ ಹಾಜಿ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಮಂಗಳವಾರ ತಡ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಕುಂಬಳೆಯಲ್ಲಿ ಇವರು ಪ್ರಾರಂಭಿಸಿದ ಸುಲ್ತಾನ್ ಗೋಲ್ಡ್ ಚಿನ್ನಾಭರಣ ಮಳಿಗೆ ಇಂದು ಉತ್ತರ ಕೇರಳ ಹಾಗು ಕರ್ನಾಟಕದ ಖ್ಯಾತ ಚಿನ್ನಾಭರಣ ಮಳಿಗೆಗಳ ಸಮೂಹವಾಗಿ ಬೆಳೆದಿದೆ.
ಸರಳ ಸಜ್ಜನ ವ್ಯಕ್ತಿಯಾಗಿ ಜನಪ್ರಿಯರಾಗಿದ್ದ ಕುಂಞಿ ಅಹ್ಮದ್ ಹಾಜಿ ಅವರು ಪತ್ನಿ, ಪುತ್ರರಾದ ಅಬ್ದುಲ್ ರವೂಫ್ ಹಾಗು ಅಬ್ದುಲ್ ರಹೀಮ್, ಮೂವರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಬುಧವಾರ ಕುಂಬಳೆ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Next Story





