ಡೆಂಗ್ ಶಂಕೆ: ಬಾಲಕಿ ಮೃತ್ಯು
ಮಂಗಳೂರು, ಆ.4: ತೀವ್ರ ಜ್ವರದಿಂದ ಬಳಲುತ್ತಿದ್ದ ನಗರದ ತೋಟಬೆಂಗ್ರೆಯ ಆರು ವರ್ಷದ ಬಾಲಕಿ ಮೃತಪಟ್ಟಿದ್ದು, ಬಾಲಕಿಯ ಸಾವಿಗೆ ಡೆಂಗ್ ಕಾರಣ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಎಲ್‌ಕೆಜಿ ವಿದ್ಯಾರ್ಥಿನಿ ಜ್ವರದಿಂದ ಒಂದು ವಾರ ಬಳಲುತ್ತಿದ್ದಳು. ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಚೇತರಿಸಿಕೊಂಡಿರಲಿಲ್ಲ. ಬಾಲಕಿಯ ಸಾವಿಗೆ ಡೆಂಗ್ ಕಾರಣ ಎಂದು ಸ್ಥಳೀಯರು ಆರೋಪಿಸಿದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ. ‘ಬಾಲಕಿ ಸಾವಿಗೆ ಡೆಂಗ್ ಜ್ವರ ಕಾರಣವಲ್ಲ, ತೀವ್ರ ಜ್ವರದಿಂದ ಆಕೆ ಮೃತಪಟ್ಟಿದ್ದಾಳೆ’ ಎಂದು ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ನವೀನ್‌ಚಂದ್ರ ತಿಳಿಸಿದ್ದಾರೆ.
ಈಗಾಗಲೇ ಬೆಂಗ್ರೆಯ ಮೂವರು ಯುವಕರು ಜ್ವರದಿಂದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಲಂಗರು ಹಾಕಿದ ದೋಣಿಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Next Story





