ಚಿಕ್ಕಮಗಳೂರಿನಲ್ಲಿ ಭಾರೀ ಮಳೆ: ಗುರುವಾರವೂ ಶಾಲೆ- ಕಾಲೇಜುಗಳಿಗೆ ರಜೆ ಫೋಷಣೆ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಆ.7: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯ ಎಲ್ಲ ಶಾಲೆ- ಕಾಲೇಜುಗಳಿಗೆ ಜಿಲ್ಲಾಡಳಿತ ಗುರುವಾರವೂ ರಜೆ ಘೋಷಣೆ ಮಾಡಿದ್ದು, ಈ ಸಂಬಂಧ ಅಪರ ಜಿಲ್ಲಾಧಿಕಾರಿ ಕುಮಾರ್ ಐದು ತಾಲೂಕುಗಳ ತಹಶೀಲ್ದಾರ್, ಬಿಇಒಗಳಿಗೆ ಆದೇಶ ನೀಡಿದ್ದಾರೆ.
ಇದರಿಂದಾಗಿ ಮಲೆನಾಡು ಭಾಗದ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಸತತ ಮೂರು ದಿನ ರಜೆ ನೀಡಿದಂತಾಗಿದೆ.
Next Story