ಧಾರಾಕಾರ ಮಳೆ: ಆ.8 ರಿಂದ 10ರವರೆಗೆ ಬೆಳಗಾವಿಯ ಶಾಲೆ-ಕಾಲೇಜುಗಳಿಗೆ ರಜೆ

ಬೆಳಗಾವಿ, ಆ.7: ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರವಾಗಿ ಧಾರಾಕಾರವಾಗಿ ಮಳೆ ಆಗುತ್ತಿರುವುದರಿಂದ ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ, ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ಆ.8 ರಿಂದ 10ರವರೆಗೆ ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ಬದಲಿಗೆ ಮುಂದೆ ಬರುವ ರವಿವಾರ ದಿನಗಳಂದು ಶಾಲಾ-ಕಾಲೇಜುಗಳನ್ನು ನಡೆಸಿ ಶಾಲಾ-ಕಾಲೇಜು ಬೋಧನಾ ಕಲಿಕಾ ಅವಧಿಯನ್ನು ಸರಿದೂಗಿಸಿ ಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





