ವಿಧಿ 370ರ ಎಲ್ಲ ನಿಬಂಧನೆಗಳ ರದ್ದತಿಯನ್ನು ಘೋಷಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ಹೊಸದಿಲ್ಲಿ, ಆ.7: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ ವಿಧಿ 370ರ ನಿಬಂಧನೆಗಳನ್ನು ರದ್ದುಗೊಳಿಸಿರುವುದಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಘೋಷಿಸಿದ್ದಾರೆ. ರದ್ದತಿಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಬಳಿಕ ರಾಷ್ಟ್ರಪತಿಗಳ ಈ ಘೋಷಣೆ ಹೊರಬಿದ್ದಿದೆ.
‘ಸಂಸತ್ತಿನ ಶಿಫಾರಸಿನ ಮೇರೆಗೆ ಸಂವಿಧಾನದ ವಿಧಿ 370ರ ಉಪನಿಯಮ (1)ರೊಂದಿಗೆ ಓದಲಾಗುವ ವಿಧಿ 370ರ ಉಪನಿಯಮ(3)ರಿಂದ ದತ್ತ ಅಧಿಕಾರವನ್ನು ಬಳಸಿ ರಾಷ್ಟ್ರಪತಿಗಳು 2019,ಆ.6ರಿಂದ ಜಾರಿಗೆ ಬರುವಂತೆ ಸದ್ರಿ ವಿಧಿ 370ರ ಎಲ್ಲ ನಿಬಂಧನೆಗಳನ್ನು ರದ್ದುಗೊಳಿಸಿದ್ದಾರೆ ಎಂದು ಮಂಗಳವಾರ ತಡರಾತ್ರಿ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಅಧಿಕೃತ ಅಧಿಸೂಚನೆಯು ತಿಳಿಸಿದೆ.
ಸಂವಿಧಾನದ ವಿಧಿ 35ಎ ಮತ್ತು 370ನ್ನು ನಿಷ್ಕ್ರಿಯಗೊಳಿಸುವ ಮಸೂದೆಯನ್ನು ರಾಜ್ಯಸಭೆಯು ಸೋಮವಾರ ಅಂಗೀಕರಿಸಿದ್ದರೆ,ಮಂಗಳವಾರ ಲೋಕಸಭೆಯಲ್ಲಿ ಒಪ್ಪಿಗೆ ಪಡೆದುಕೊಂಡಿದೆ.
Next Story





