ಮಂದಾರ ರಾಮಾಯಣಕ್ಕೆ ಜನಪದೀಯ ಸೊಗಡು: ಡಾ.ಶ್ರೀನಾಥ್

ಮಂಗಳೂರು, ಆ.7: ಮಂದಾರ ರಾಮಾಯಣವು ತುಳುವ ಮಣ್ಣಿನ ಜನಪದ ಸೊಗಡನ್ನು ಹೊಂದಿದ್ದು ಅದು ಇಂದಿಗೂ ಪ್ರಸ್ತುತವಾಗಿದೆ. ಹಾಗಾಗಿಯೇ ಮಂದಾರ ರಾಮಾಯಣ ಸಾಮಾನ್ಯ ಜನರಿಗೂ ನಿಕಟವಾಗಿ ತೋರುತ್ತದೆ ಎಂದು ತುಳುವೆರೆ ಆಯನೊ ಕೂಟ ಬದಿಯಡ್ಕದ ಗೌರವ ಅಧ್ಯಕ್ಷ ಪ್ರೊ. ಎ.ಶ್ರೀನಾಥ್ ಅಭಿಪ್ರಾಯಪಟ್ಟರು.
ಶಕ್ತಿನಗರ ತುಳುವೆರೆ ಚಾವಡಿಯಲ್ಲಿ ಇತ್ತೀಚೆಗೆ ಜರಗಿದ ‘ಏಳದೆ ಮಂದಾರ ರಾಮಾಯಣ: ಸುಗಿಪು- ದುನಿಪು’ ಪ್ರವಚನ ಸಪ್ತಾಹದ ಐದನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಗಣೇಶ್ ಮಹಾಕಾಳಿ, ತುಳುವೆರೆ ಆಯನೊ ಕೂಟ ಕುಡ್ಲದ ಕಾರ್ಯದರ್ಶಿ ಯಾದವ ಕೋಟ್ಯಾನ್ ಅತಿಥಿಗಳಾಗಿದ್ದರು.
ಮಂದಾರ ರಾಮಾಯಣ ಸಪ್ತಾಹದ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುವರ್ಲ್ಡ್ (ರಿ.) ಕುಡ್ಲ ಅಧ್ಯಕ್ಷ ಡಾ.ರಾಜೇಶ್ ಆಳ್ವ ಅತಿಥಿಗಳನ್ನು ಗೌರವಿಸಿದರು. ತುಳುವೆರೆ ಕೂಟ ಶಕ್ತಿನಗರ ಅಧ್ಯಕ್ಷೆ ಭಾರತಿ ಅಮೀನ್, ಸುಧಾಕರ ಜೋಗಿ, ಹರ್ಷ ರೈ ಪುತ್ರಕಳ, ವಿಶ್ವನಾಥ್ ಉಪಸ್ಥಿತರಿದ್ದರು. ವಿದ್ಯಾಶ್ರೀ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ಮಂದಾರ ರಾಮಾಯಣದ ಐದನೇ ದಿನದ ‘ಪಟ್ಟೊಗು ಪೆಟ್ಟ್’ ಕಾವ್ಯ ಭಾಗವನ್ನು ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್ ವಾಚಿಸಿದರು. ಡಾ. ದಿನಕರ್ ಎಸ್. ಪಚ್ಚನಾಡಿ ವ್ಯಾಖ್ಯಾನಿಸಿದರು. ಭೂಷಣ್ ಕುಲಾಲ್ ಸ್ವಾಗತಿಸಿದರು. ಶೃತಿ ಹರ್ಷ ವಂದಿಸಿದರು.







