ನಟ ಹೃತಿಕ್ ರೋಷನ್ ಅಜ್ಜ, ಖ್ಯಾತ ನಿರ್ದೇಶಕ ಓಂ ಪ್ರಕಾಶ್ ನಿಧನ
ಮುಂಬೈ, ಆ. 7: ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಅಜ್ಜ ಹಾಗೂ ಹಿರಿಯ ಚಿತ್ರ ನಿರ್ಮಾಪಕ, ನಿರ್ದೇಶಕ ಜೆ. ಓಂ ಪ್ರಕಾಶ್ ಬುಧವಾರ ಬೆಳಗ್ಗೆ ಮುಂಬೈಯಲ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಓಂ ಪ್ರಕಾಶ್ ಅವರು ಭಗವಾನ್ ದಾದಾ, ಆಪ್ ಕೆ ಸಾಥ್, ಆಕಿರ್ ಕ್ಯೋ, ಆಸ್ಪಾಸ್, ಅರ್ಪಣ್, ಆಶಾ, ಆಶಿಕ್ ಹೂ ಬಹರೂನ್ ಕಾ, ಆಪ್ನಾಪನ್, ಆಕ್ರಮಣ್ ಹಾಗೂ ಆಪ್ ಕಿ ಕಸಮ್ ಮೊದಲಾದ ಚಿತ್ರಗಳಿಂದ ಜನಪ್ರಿಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಆಂಧಿ, ಆಂಕೋನ್ ಆಂಕೋನ್ ಮೇ, ಆಯಾ ಸಾವನ್ ಝೂಮ್ ಕೆ, ಆಯೆ ದಿನ್ ಬಹರ್ ಕೆ, ಆಯಿ ಮಿಲನ್ ಕಿ ಬೇಲಾ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. 1995ರಿಂದ 1996ರ ವರಗೆ ಅವರು ಭಾರತದ ಫಿಲ್ಮ್ ಫೆಡರೇಶನ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಓಂ ಪ್ರಕಾಶ್ ನಿಧನಕ್ಕೆ ಬಾಲಿವುಡ್ನ ನಟ ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story