ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪ್ರಾರಂಭ
ಉಡುಪಿ, ಆ.7: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ 2018-19ನೇ ಶ್ಯೆಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಸ್ನಾತಕ ಪದವಿ ಕೋರ್ಸ್‌ಗಳಾದ ಬಿ.ಎ/ಬಿ.ಕಾಂ/ಬಿ.ಲಿಬ್.ಐ.ಎಸ್ಸಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಾದ ಎಂ.ಎ/ಎಂ.ಕಾಂ/ಎಂ.ಲಿಬ್.ಐಎಸ್ಸಿ, ಎಂಸ್ಸಿ ಕೋರ್ಸ್‌ಗಳು (ಪ್ರಥಮ ಸೆಮಿಸ್ಟರ್), ಪಿ.ಜಿ.ಡಿಪ್ಲೋಮ ಕೋರ್ಸ್‌ಗಳು, ಡಿಪ್ಲೋಮ ಕೋರ್ಸ್‌ಗಳು ಮತ್ತು ಸರ್ಟಿಪಿಕೇಟ್ ಕೋರ್ಸ್‌ಗಳು ಹಾಗೂ ಎಂಬಿಎ ಮುಂತಾದ ಕೋರ್ಸ್‌ಗಳಿಗೆ ಪ್ರವೇಶಗಳು ಪ್ರಾರಂಭವಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ. 25ರಷ್ಟು ವಿನಾಯಿತಿ ಇರುತ್ತದೆ.
ಕೋರ್ಸ್‌ಗಳಿಗೆ ದಂಡ ಶುಲ್ಕವಿಲ್ಲದೇ ಆ.25ರವರೆಗೆ ಹಾಗೂ 200 ರೂ. ದಂಡ ಶುಲ್ಕದೊಂದಿಗೆ ಆ.31ರವರೆಗೆ ಕರಾಮುವಿ, ಪ್ರಾದೇಶಿಕ ಕೆಂದ್ರ, 2ನೇ ಮಹಡಿ, ಹಳೇ ಜಿಲ್ಲಾ ಪಂಚಾಯತ್ ಕಟ್ಟಡ, ಬನ್ನಂಜೆ, ಉಡುಪಿ ಇಲ್ಲಿ (ದೂರವಾಣಿ: 0820-2522247) ಪ್ರವೇಶವನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳು -www.ksoumysore.karnataka.gov.in- ಇಲ್ಲಿಂದ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು. ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ನಿರ್ದೇಶಕ ಡಾ.ಕೆ.ಪಿ. ಮಹಾಲಿಂಗಯ್ಯ ಕಲ್ಕುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







