ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ‘ಭಾರತ ರತ್ನ’ ಪ್ರದಾನ
Photo: PTI
ಹೊಸದಿಲ್ಲಿ, ಆ.8: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ದೇಶದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ ಪ್ರದಾನಿಸಿ ಗೌರವಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾರತ ರತ್ನ ಪ್ರದಾನಿಸಿದರು.
ಇದೇ ಸಂದರ್ಭ ಪ್ರಸಿದ್ಧ ಗಾಯಕ ಭೂಪೇನ್ ಹಝಾರಿಕಾ ಮತ್ತು ಭಾರತೀಯ ಜನ ಸಂಘದ ಸ್ಥಾಪಕ ಸದಸ್ಯ ನಾನಾಜಿ ದೇಶ್ ಮುಖ್ ಅವರಿಗೆ ‘ಭಾರತ ರತ್ನ’ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು.
Next Story