ಕೇರಳದಲ್ಲಿ ಭಾರೀ ಮಳೆ: ಐದು ರೈಲುಗಳ ಸಂಚಾರ ರದ್ದು

ಉಡುಪಿ, ಆ. 9: ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ದಕ್ಷಿಣ ರೈಲ್ವೆ ರದ್ದುಪಡಿಸಿದೆ.
ಎರ್ನಾಕುಲಂ ಹಾಗೂ ನಿಝಾಮುದ್ದೀನ್ ನಡುವೆ ಸಂಚರಿಸುವ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ತಿರುವನಂತಪುರಂ ಹಾಗೂ ಕುರ್ಲಾ ನಡುವೆ ಸಂಚರಿಸುವ ನೇತ್ರಾವತಿ ಎಕ್ಸ್‌ಪ್ರೆಸ್, ಕೊಚ್ಚುವೇಲ್ ಹಾಗೂ ಇಂದೋರ್ ನಡುವೆ ಸಂಚರಿಸುವ ಇಂದೋರ್ ಎಕ್ಸ್‌ಪ್ರೆಸ್, ಕೊಚ್ಚುವೇಲ್ ಹಾಗೂ ಡೆಹ್ರಾಡೂನ್ ನಡುವೆ ಸಂಚರಿಸುವ ಡೆಹ್ರಾಡೂನ್ ಎಕ್ಸ್‌ಪ್ರೆಸ್ ಅಲ್ಲದೇ ಚೈನ್ನೈಯಿಂದ ವಾಸ್ಕೋಡಗಾಮಕ್ಕೆ ತೆರಳುವ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಇಂದು ರದ್ದು ಪಡಿಸಲಾಗಿದೆ ಎಂದು ಮಂಗಳೂರು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
Next Story





