ಭಾರತದ ಕೈಗಾರಿಕೆ ಉತ್ಪಾದನೆ ಬೆಳವಣಿಗೆ ಕೇವಲ ಶೇ. 2ಕ್ಕೆ ಇಳಿಕೆ

ಹೊಸದಿಲ್ಲಿ, ಆ. 9: ಭಾರತದ ಕೈಗಾರಿಕೆ ಉತ್ಪಾದನೆಯ ಬೆಳವಣಿಗೆ ಕಳೆದ ವರ್ಷದ ಶೇ. 7ಕ್ಕೆ ಹೋಲಿಸಿದರೆ, ಈ ವರ್ಷ ಜೂನ್‌ನಲ್ಲಿ ಕೇವಲ ಶೇ. 2 ಮಾತ್ರ. ಭಾರತೀಯ ಕಂಪೆನಿಗಳ ಉತ್ಪಾದಕತೆಯಲ್ಲಿ ತೀವ್ರ ಇಳಿಕೆಯಾಗಿರುವುದನ್ನು ತೋರಿಸುವ ಅಧಿಕೃತ ದತ್ತಾಂಶವನ್ನು ಸರಕಾರ ಆಗಸ್ಟ್ 9ರಂದು ಬಿಡುಗಡೆ ಮಾಡಿದೆ. ಕೈಗಾರಿಕೆ ಉತ್ಪಾದನೆ ಬೆಳವಣಿಗೆ ಕಳೆದ ತಿಂಗಳ ಶೇ. 2.5ಕ್ಕೆ ಹೋಲಿಸಿದರೆ, ಜೂನ್‌ನಲ್ಲಿ ಕೇವಲ ಶೇ. 1.2.
ಎಪ್ರಿಲ್-ಜೂನ್ ಅವಧಿಯಲ್ಲಿ 8 ಕೋಟಿ ಕೈಗಾರಿಕೆಗಳು ಸಂಚಿತ ಬೆಳವಣಿಗೆ ಕೇವಲ ಶೇ. 3.6. ಎಂದು ದಾಖಲಿಸಿವೆ. ರಫ್ತು ಚಟುವಟಿಕೆಗಳು ಶೇ. 1.7ಕ್ಕೆ ಇಳಿಕೆಯಾಗಿದೆ. ಐದನೇ ಅತಿ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಭಾರತ ಈಗ ಕಳೆದುಕೊಂಡಿದೆ. ಭಾರತದ ಹಲವು ವಲಯಗಳು ಹಿಂಜರಿಕೆ ಎದುರಿಸುತ್ತಿವೆ. ಹೂಡಿಕೆಯ ಕೊರತೆ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಹೂಡಿಕೆ ನಿಯಮಗಳನ್ನು ಸಡಿಲಗೊಳಿಸುವಂತೆ ಹಾಗೂ ಉದ್ಯಮಗಳಿಗೆ ಸುಲಭವಾಗಿ ಸಾಲ ದೊರಕಲು ಬ್ಯಾಂಕ್‌ಗಳಿಗೆ ಸೂಚನೆ ನೀಡುವಂತೆ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
Next Story





