ಎಸ್ಪಿಯಾಗಿ ಮುಂದುವರೆಯಲು ರವಿ ಚೆನ್ನಣ್ಣನವರಿಗೆ ಸಿಎಟಿ ಆದೇಶ
ಬೆಂಗಳೂರು, ಆ.9: ಬೆಂ.ಗ್ರಾಮಾಂತರ ಜಿಲ್ಲೆಯ ಎಸ್ಪಿಯಾಗಿದ್ದ ಟಿ.ಪಿ.ಶಿವಕುಮಾರ್, ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸಿಎಟಿ(ಕೇಂದ್ರಿಯ ಆಡಳಿತ ನ್ಯಾಯಮಂಡಳಿ) ವಜಾಗೊಳಿಸಿ. ಬೆಂ. ಗ್ರಾಮಾಂತರ ಎಸ್ಪಿಯಾಗಿ ರವಿ ಡಿ. ಚೆನ್ನಣ್ಣನವರಿಗೆ ಮುಂದುವರೆಯಲು ಆದೇಶಿಸಿದೆ.
ರೆಗ್ಯೂಲರ್ ಟ್ರಾನ್ಸಫರ್ ಎಂದು ಟಿ.ಪಿ.ಶಿವಕುಮಾರ್, ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಪೀಠವು ಕಡತಗಳನ್ನು ಪರಿಶೀಲಿಸಿ, ಈ ವರ್ಗಾವಣೆ ರೆಗ್ಯೂಲರ್ ಟ್ರಾನ್ಸಫರ್ ಅಡಿಯಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿಯನ್ನು ವಜಾಗೊಳಿಸಿದೆ. ರವಿ ಡಿ. ಚೆನ್ನಣ್ಣವರಿಗೆ ಎಸ್ಪಿಯಾಗಿ ಮುಂದುವರೆಯಲು ಆದೇಶಿಸಿದೆ.
ಇದೇ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ರೆಗ್ಯೂಲರ್ ಟ್ರಾನ್ಸಫರ್ ಎಂದು ಸುಳ್ಳು ಹೇಳಿದ್ದಕ್ಕೆ ನ್ಯಾಯಾಧೀಶರ ಮುಂದೆ ಕ್ಷಮೆಯಾಚಿಸಿದರು. ಟಿ.ಪಿ.ಶಿವಕುಮಾರ್ ಅವರನ್ನು ಸರಕಾರ ಚುನಾವಣೆ ವೇಳೆಯಲ್ಲಿ ಬೆಂ.ಗ್ರಾಮಾಂತರ ಜಿಲ್ಲೆಗೆ ಎಸ್ಪಿಯಾಗಿ ವರ್ಗಾಯಿಸಿತ್ತು. ಈಗ ಅದೇ ಜಾಗಕ್ಕೆ ಚೆನ್ನಣ್ಣ ಅವರನ್ನು ಎಸ್ಪಿಯಾಗಿ ವರ್ಗಾಯಿಸಿದೆ.