ಪೂರ್ಣ ಸ್ವರಾಜ್ಯಕ್ಕಾಗಿ ಮೊದಲು ಹೋರಾಟ ನಡೆಸಿದವರು ಕಾರ್ಮಿಕ ಸಂಘಟನೆ: ಅಮರಜೀತ್ ಕೌರ್
ಬಿ.ವಿ ಕಕ್ಕಿಲ್ಲಾಯ ಶತಾಬ್ದಿ ಕಾರ್ಯಕ್ರಮ

ಮಂಗಳೂರು, ಆ.10: ಸ್ವಾತಂತ್ರ ಸಂಗ್ರಾಮದಲ್ಲಿ ದುಡಿಯುವ ವರ್ಗ ಮಹತ್ವದ ಪಾತ್ರ ವಹಿಸಿದೆ. ಭಾರತ ಸ್ವಾತಂತ್ರ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಸಂಘಟನೆಗಳು ಈ ತೀರ್ಮಾನವನ್ನು ಎಂಟು ವರ್ಷಗಳ ನಂತರ ತೆಗೆದುಕೊಂಡರು ಎಂದು ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ಅಮರಜೀತ್ ಕೌರ್ ತಿಳಿಸಿದ್ದಾರೆ.
ಬಿ.ವಿ.ಕಕ್ಕಿಲ್ಲಾಯ ಜನ್ಮ ಶತಾಬ್ದಿಯ ಅಂಗವಾಗಿ ಹಮ್ಮಿ ಕೊಂಡ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟನೆಯ ಬಳಿಕ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ದುಡಿಯುವ ವರ್ಗಗಳ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದರು.
ದೇಶದಲ್ಲಿ ಸ್ವಾತಂತ್ರ ಹೋರಾಟದ ಹಂತದಲ್ಲಿ ದುಡಿಯುವ ವರ್ಗಗಳ ಬಗ್ಗೆ ಶಕ್ತಿ ಮತ್ತು ಪ್ರಾಮುಖ್ಯತೆಯ ಬಗ್ಗೆ ಸ್ವಾತಂತ್ರ ಹೋರಾಟ ಗಾರರು ಮನಗಂಡರು. ದೇಶದಲ್ಲಿ ಕಾರ್ಮಿಕರ ಸ್ಥಿತಿ ಬದಲಾಗಬೇಕಾದರೆ ದೇಶಕ್ಕೆ ಪೂರ್ಣ ಸ್ವಾತಂತ್ರದ ಅಗತ್ಯವಿದೆ ಎಂದು ಮೊದಲು ಪ್ರತಿಪಾದನೆ ಮಾಡಿರುವುದು ಸಿಐಟಿಯುನಂತಹ ಕಾರ್ಮಿಕ ಸಂಘಟನೆ .1919ರಲ್ಲಿ ಜಲಿಯಾನವಾಲಾ ಭಾಗ್ ದುರಂತದ ಬಳಿಕ ದೇಶದ ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿದ ಎಲ್ಲಾ ಕರೆಗಳಿಗೆ ಸ್ಪಂದಿಸಿತು.1921ರಲ್ಲಿ ನಡೆದೆ ಸಿಐಟಿಯು ಕಾರ್ಮಿಕರ ಸಮಾವೇಶದಲ್ಲಿ ದೇಶಕ್ಕೆ ಪೂರ್ಣ ಸ್ವಾತಂತ್ರ ಕ್ಕಾಗಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಈ ತೀರ್ಮಾನವನ್ನು ಸುಮಾರು ಎಂಟು ವರ್ಷಗಳ ಬಳಿಕ ಸ್ವಾತಂತ್ರ ಹೋರಾಟದ ಮುಂಚೂಣಿಯ ಸಂಘಟನೆಗಳು ಕೈ ಗೆತ್ತಿಕೊಂಡಿತು. ಪ್ರಪಂಚದಲ್ಲಿ ವೈಜ್ಞಾನಿಕ ಪ್ರಗತಿ ಸಾಧನೆಯಾದ ಬಳಿಕ ಕಾರ್ಮಿಕ ವರ್ಗಕ್ಕೂ ಹೆಚ್ಚಿನ ಸೌಕರ್ಯ ದೊರೆಯುವ ಬದಲು ಅವರ ಮೇಲೆ ಇನ್ನಷ್ಟು ಕೆಲಸದ ಹೊರೆ ಬೀಳುವಂತಾಯಿತು ಎಂದು ಅಮರಜಿತ್ ಕೌರ್ ತಿಳಿಸಿದ್ದಾರೆ.
ಕಾರ್ಮಿಕರು ತಮ್ಮ ಬದುಕಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ಸರಕಾರವನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾದರೆ. ಅದಕ್ಕಾಗಿ ರಾಜಕೀಯ ಗುರಿಯನ್ನು ಹೊಂದಿದ್ದಾರೆ. ದೇಶದಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಈಡಾಗಿರುವ ಸಂದರ್ಭದಲ್ಲಿ ನಡೆಸಿದ ಹೋರಾಟಕ್ಕೆ ಬಿ.ವಿ.ಕಕ್ಕಿಲ್ಲಾಯ ಸ್ಪೂರ್ತಿ. ಅವರ ಪ್ರೇರಣೆಯ ಹೋರಾಟ ಇನ್ನೂ ಮುಂದುವರಿಯಲಿದೆ, ಮುಂದುವರಿಯಬೇಕಾಗಿದೆ ಎಂದು ಕೌರ್ ತಿಳಿಸಿದರು. ಸಂಘಟಕರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







