ಉಡುಪಿ: ಸ್ತನ್ಯಪಾನದ ಮಹತ್ವ ಕುರಿತ ಮಾಹಿತಿ ಕಾರ್ಯಕ್ರಮ

ಉಡುಪಿ, ಆ.10: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಬಾಲರೋಗ ವಿಭಾಗದ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಪ್ರಯುಕ್ತ ಪೋಷಕರಿಗೆ ಶಿಶುವಿನ ಆರೋಗ್ಯದಲ್ಲಿ ಸ್ತನ್ಯಪಾನದ ಮಹತ್ವ ಮತ್ತು ಸ್ತನ್ಯಪಾನದ ವಿಧಿವಿಧಾನಗಳ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಸ್ಪತ್ರೆಯ ವಾಗ್ಭಟ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ವಹಿಸಿದ್ದರು. ಸಂಸ್ಥೆಯ ಪ್ರಸೂತಿತಂತ್ರ ಮತು ಸ್ತ್ರೀರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಪಣ ಜೈನ್ ಸ್ತನ್ಯಪಾನದ ಕುರಿತ ಮಾಹಿತಿಯನ್ನು ನೀಡಿದರು.
ಕಾಲೇಜಿನ ಬಾಲರೋಗ ವಿಭಾಗದ ಮುಖ್ಯಸ್ಥ ಡಾ.ಪ್ರಥ್ವಿರಾಜ್ ಪುರಾಣಿಕ್ ಸ್ವಾಗತಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಕಾವ್ಯ ಕಾರ್ಯಕ್ರಮ ನಿರೂಪಿಸಿ ದರು. ಸಹಾಯಕ ಪ್ರಾಧ್ಯಾಪಕಿ ಡಾ.ನಾಗರತ್ನ ಎಸ್.ಜೆ. ವಂದಿಸಿದರು. ಡಾ.ಶರಶ್ಚಂದ್ರ ಆರ್. ಹಾಗೂ ಡಾ.ಶ್ರೀರಾಜ್ ಸಹಕರಿಸಿದರು.
Next Story





