ನಾಣ್ಯ ಸ್ವೀಕರಿಸದೇ ಪ್ರಯಾಣಿಕನನ್ನು ಕೆಳಗಿಳಿಸಿದ ಬಸ್ ಕಂಡಕ್ಟರ್: ದೂರು
ಮಂಗಳೂರು, ಆ.10: ಖಾಸಗಿ ಬಸ್‌ವೊಂದರಲ್ಲಿ 10 ರೂ. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿ ಪ್ರಯಾಣಿಕನನ್ನು ಕೆಳಗಿಳಿಸಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಜ್ಪೆ ನಿವಾಸಿ ಇರ್ಷಾದ್ ಹನೀಫ್ ಎಂಬವರು ಆ. 8ರಂದು ಸಂಜೆ 6:40ಕ್ಕೆ ಪಡೀಲ್‌ನಿಂದ ಪಂಪ್‌ವೆಲ್‌ಗೆ ತೆರಳಲು ಖಾಸಗಿ ಬಸ್‌ವೊಂದನ್ನು ಹತ್ತಿದ್ದಾರೆ. ಟಿಕೆಟ್ ಪಡೆಯಲು 10 ರೂ.ನ ನಾಣ್ಯವನ್ನು ಕಂಡಕ್ಟರ್‌ಗೆ ನೀಡಿದ್ದಾರೆ. ಈ ವೇಳೆ ನಾಣ್ಯ ತಿರಸ್ಕರಿಸಿದ ಕಂಡಕ್ಟರ್ ಬಸ್‌ನಿಂದ ಒತ್ತಾಯಪೂರ್ವಕವಾಗಿ ಇಳಿಸಿದ್ದಾನೆ. ‘ನಾಣ್ಯಗಳನ್ನು ಇಲ್ಲಿ ಸ್ವೀಕರಿಸುವುದಿಲ್ಲ; ಅದೇನಿದ್ದರೂ ಕೇರಳದಲ್ಲಿ ಮಾತ್ರ’ ಎಂದಿದ್ದಾನೆ. ಬಳಿಕ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಇದರಿಂದ ತನಗೆ ಅನ್ಯಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಸ್‌ನ ಕಂಡಕ್ಟರ್‌ನನ್ನು ಠಾಣೆಗೆ ಕರೆಸಿ, ಬುದ್ಧಿಮಾತು ಹೇಳಿಲಾಗಿದೆ. ಇನ್ನು ಮುಂದೆ ನಾಣ್ಯಗಳನ್ನು ಸ್ವೀಕರಿಸಲು ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





