ರೋಹನ್, ಡೆನಿಸ್ ಸೆಮಿ ಫೈನಲ್‌ಗೆ
ಮಾಂಟ್ರಿಯಲ್ ಮಾಸ್ಟರ್ಸ್

ಮಾಂಟ್ರಿಯಲ್, ಆ.10: ಭಾರತದ ರೋಹನ್ ಬೋಪಣ್ಣ ಹಾಗೂ ಡೆನಿಸ್ ಶಪೊವಾಲೊವ್ ಎಟಿಪಿ ಮಾಂಟ್ರಿಯಲ್ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ತಲುಪಿದರು. ಎದುರಾಳಿ ಫ್ರಾನ್ಸ್‌ನ ಬೆನೊಟ್ ಪೈರ್ ಹಾಗೂ ಸ್ವಿಸ್‌ನ ಸ್ಟಾನ್ ವಾವ್ರಿಂಕ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸದೇ ವಾಕ್‌ಓವರ್ ಪಡೆದ ಕಾರಣ ಇಂಡೋ-ಕೆನಡಾ ಜೋಡಿ ಬೋಪಣ್ಣ ಹಾಗೂ ಶಪೊವಾಲೊವ್ ಸೆಮಿ ಫೈನಲ್‌ಗೆ ಪ್ರವೇಶಿಸಿದರು.
ಬೋಪಣ್ಣ ಹಾಗೂ ಶಪೊವಾಲೊವ್ ಸೆಮಿ ಫೈನಲ್‌ನಲ್ಲಿ ಡಚ್ ಜೋಡಿ ರಾಬಿನ್ ಹಾಸೆ ಹಾಗೂ ವೆಸ್ಲೆ ಕೂಲ್‌ಹಾಫ್‌ರನ್ನು ಸೆಮಿ ಫೈನಲ್‌ನಲ್ಲಿ ಎದುರಿಸಲಿದ್ದಾರೆ.
ಶ್ರೇಯಾಂಕರಹಿತ ಬೋಪಣ್ಣ ಹಾಗೂ ಶಪೊವಾಲೊವ್ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಕೈಲ್ ಎಡ್ಮಂಡ್ ಹಾಗೂ ಟೇಲರ್ ಫ್ರಿಟ್ಜ್‌ರನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೊದಲು ನಾಲ್ಕನೇ ಶ್ರೇಯಾಂಕದ ಫ್ರಾನ್ಸ್ ಜೋಡಿ ನಿಕೊಲಾ ಮಹುಟ್ ಹಾಗೂ ಎಡ್ವರ್ಡ್ ರೋಜರ್-ವಸ್ಸೆಲಿನ್‌ರನ್ನು ಟೂರ್ನಿಯಿಂದ ಹೊರಗಟ್ಟಿದರು.
Next Story





